ಮಂಡ್ಯ: ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ 5 ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದೆ.
ಮೇಲುಕೋಟೆ ವನ್ಯ ಜೀವಿ ವಲಯ ಅರಣ್ಯದಲ್ಲಿ ಬೇಟೆಯಾಡುತ್ತಿದ್ದ ರಾಯಸಮುದ್ರ ಗ್ರಾಮದವರಾದ ಚಂದ್ರ, ನಾಗ, ನವೀನ್ ಗೌಡ ಹಾಗೂ ಮದೇನಹಳ್ಳಿಯ ಲೋಕೇಶ, ತಿರುಗನಹಳ್ಳಿಯ ಗಣೇಶ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೇಲುಕೋಟೆ ಅರಣ್ಯದ ನಾರಾಯಣ ದುರ್ಗ ಗೊದ್ದಪ್ಪನ ಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು, ಬಂಧಿತ ಆರೋಪಿಗಳಿಂದ ಒಂದು ಕಾಡು ಬೆಕ್ಕಿನ ಕಳೇಬರ, ಇಂಡಿಕಾ ಕಾರು,1 ಮಚ್ಚು ಜಪ್ತಿ ಮಾಡಲಾಗಿದೆ. ವಲಯ ಅರಣ್ಯಾಧಿಕಾರಿ ಅನನ್ಯ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿ ಬೇಟೆಗಾರರನ್ನು ಬಂಧಿಸಲಾಗಿತ್ತು.
ನವಿಲು ಬೇಟೆಗಾರರ ಬಂಧನ:
ನವಿಲು ಬೇಟೆಯಾಡ್ತಿದ್ದ ಇಬ್ಬರು ಯುವಕರನ್ನು ಬಂಧಿಸಿ, ನವಿಲು ಸೇರಿ ಮೊಪೆಡ್ ಹಾಗೂ ಕೃತ್ಯಕ್ಕೆ ಬಳಸಿ ಕ್ಯಾಟರ್ ಬಿಲ್ ವಶಕ್ಕೆ ಪಡೆಯಲಾಗಿದೆ.ಕೆ.ಆರ್.ಪೇಟೆ ತಾಲೂಕಿನ ಜಾಗಿನಕೆರೆ ಬಳಿ ನವಿಲು ಬೇಟೆಯಾಡಿದ್ದ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಪ್ರಭು ಮತ್ತು ಮಲ್ಲೇಶ್ ಎಂಬುವವರನ್ನ ಬಂಧಿಸಲಾಗಿದೆ. ವಲಯ ಅರಣ್ಯಾಧಿಕಾರಿ ಮಧುಸೂಧನ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.