ಮಂಡ್ಯ: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದವರು ನಡೆಸುತ್ತಿರುವ ಪೇ ಸಿಎಂ ಪ್ರತಿಭಟನೆ ನಡುವೆ ಮಂಡ್ಯದ ರೈತರು ಪೇ ಫಾರ್ಮರ್ ಅಭಿಯಾನ ಆರಂಭಿಸಿದ್ದಾರೆ.
ಮಂಡ್ಯ ರೈತರಿಂದ PAY FARMER ಅಭಿಯಾನ: ಇಂದು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ನೂರಾರು ರೈತರು ಪೇ ಫಾರ್ಮರ್ ಪೋಸ್ಟರ್ ಬಿಡುಗಡೆಗೊಳಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೇ ಫಾರ್ಮರ್ ಪೋಸ್ಟ್ ಹಿಡಿದು ನಿಂತ ರೈತರು ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಭಿಯಾನ ಆರಂಭಿಸಿರುವ ರೈತರು, ಕಾರು, ಹೆದ್ದಾರಿಯ ಗೋಡೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಗೋಡೆಗಳು, ಕೆಎಸ್ಆರ್ಟಿಸಿ, ಐರಾವತ, ರಾಜಹಂಸ ಬಸ್ಗಳ ತಡೆದು ಪೇ ಫಾರ್ಮರ್ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.
ಪೋಸ್ಟರ್ ಅಂಟಿಸಿ ಸರ್ಕಾರದ ವಿರುದ್ದ ಆಕ್ರೋಶ: ಇದೇ ವೇಳೆ ಟನ್ ಕಬ್ಬಿಗೆ 4500 ರೂ. ನಿಗದಿ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಒಂದು ವೇಳೆ ಸೂಕ್ತ ಬೆಲೆ ನೀಡದಿದ್ದರೆ ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಧುಚಂದನ್, ಪ್ರಸನ್ನಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಓದಿ: ಪೇ - ಸಿಎಂ ಅಭಿಯಾನದ ಗಮನ ಬೇರೆಡೆ ಸೆಳೆಯುವ ಯತ್ನ ಸರ್ಕಾರ ಮಾಡುತ್ತಿದೆ: ರಾಮಲಿಂಗಾರೆಡ್ಡಿ