ETV Bharat / state

ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆ - ಈಟಿವಿ ಭಾರತ ಕನ್ನಡ

ಪಂಚರತ್ನ ರಥಯಾತ್ರೆ ಇಂದು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದು, ಕಾರ್ಯಕರ್ತರು ಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಿದರು.

pancha ratna rathayatre entered mandya
ಪಂಚರತ್ನ ರಥಯಾತ್ರೆ ಬಗ್ಗೆ ಹೆಚ್​ಡಿಕೆ ಹೇಳಿಕೆ
author img

By

Published : Dec 23, 2022, 6:05 AM IST

ಪಂಚರತ್ನ ರಥಯಾತ್ರೆ ಬಗ್ಗೆ ಹೆಚ್​ಡಿಕೆ ಹೇಳಿಕೆ

ಮಂಡ್ಯ: ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇಂದು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದೆ. ಯಾತ್ರೆಗೆ ಶಾಸಕ ಎಂ ಶ್ರೀನಿವಾಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ನನಗೆ ಅಧಿವೇಶನಕ್ಕಿಂತ ಯಾತ್ರೆಯೇ ಮುಖ್ಯ. ಕಳೆದ ಹಲವು ಅಧಿವೇಶನಗಳಲ್ಲಿ ಮಾತನಾಡಿದ ಯಾವ ವಿಚಾರವೂ ಅನುಷ್ಠಾನಗೊಂಡಿಲ್ಲ. ಹಾಗಾಗಿ ನನಗೆ ಅಧಿವೇಶನಕ್ಕಿಂತ ರೈತರು, ಜನಸಾಮಾನ್ಯರಿಗೆ ತರಲು ಹೊರಟಿರುವ ಪಂಚರತ್ನ ರಥಯಾತ್ರೆ ನನಗೆ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಎಷ್ಟು ವಿಧಾನಸಭಾ ಕಲಾಪದಲ್ಲಿ ಮಾತನಾಡಿರುವುದನ್ನ ಈ ಸರ್ಕಾರ ಜಾರಿ ಮಾಡಿದೆ ಎಂದು ಪ್ರಶ್ನೆ ಮಾಡಿದರು. ನನಗೆ ಕಳೆದ ಮೂರು ದಿನಗಳಿಂದ ಮಂಡ್ಯ ಜಿಲ್ಲೆಯ ಜನರು ಅತ್ಯಂತ ಅಭೂತಪೂರ್ವವಾಗಿ ಸ್ವಾಗತ ನೀಡಿದ್ದಾರೆ. ನಮ್ಮ ಮಂಡ್ಯ ಭಾಗದಲ್ಲಿ ಕಳೆದ ಚುನಾವಣೆಗಿಂತ ಹೆಚ್ಚಿನ ಒಲವು ಈ ಬಾರಿ ಕಾಣುತ್ತಿದೆ ಎಂದರು.

ಇದನ್ನೂ ಓದಿ: ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೇಶ್ವರ್​ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.