ETV Bharat / state

ಎಲ್ಲಾ ಜೆಡಿಎಸ್​​ನವರದೇ, ನಮ್ಮದು ಏನೂ ಇಲ್ಲ.. ಮಾಜಿ ಸಚಿವ ಚಲುವರಾಯಸ್ವಾಮಿ.. - chaluvarayaswamy statement

ನಮಗೆ ಯಾವುದೇ ಬೇಜಾರಿಲ್ಲಾ.. ನಾನು ಯಾವುದೇ ಕೋರ್ಟ್​ಗೆ ಲೀಗಲ್ ಅಪ್ಲಿಕೇಶನ್ ಹಾಕಲ್ಲಾ‌‌. ಅವರೆಲ್ಲಾ ದೊಡ್ಡ ದೊಡ್ಡ ಪಿಹೆಚ್‌ಡಿ ಪಡೆದವರು, ಬುದ್ಧಿವಂತರಿದ್ದಾರೆ. ಅವರ ವಿರುದ್ದ ನಾವು ಯಾವತ್ತೂ ಸಮರ್ಥರು ಅಂತಾ ಹೇಳಿಕೊಂಡಿಲ್ಲ..

nothing-is-ours-all-belong-jds-parties
ಮಾಜಿ ಸಚಿವ ಚಲುವರಾಯಸ್ವಾಮಿ
author img

By

Published : Feb 2, 2021, 7:02 PM IST

ಮಂಡ್ಯ: ಇಡೀ ಜಿಲ್ಲೆ ಜೆಡಿಎಸ್​ನವರದೇ.. ನಮ್ಮ ಹತ್ತಿರ ಏನೂ ಇಲ್ಲ. ನಾವು ಜೀರೋ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಜೆಡಿಎಸ್​​ ಶಾಸಕ ಸುರೇಶ್​ಗೌಡರಿಗೆ ಟಾಂಗ್​ ನೀಡಿದರು.

ಎಲ್ಲಾ ಜೆಡಿಎಸ್​​ನವರದೇ, ನಮ್ಮದೂ ಏನೂ ಇಲ್ಲ.. ಮಾಜಿ ಸಚಿವ ಚಲುವರಾಜಸ್ವಾಮಿ ವ್ಯಂಗ್ಯ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಗೆಲುವು ಕಾಂಗ್ರೆಸ್​ದು ಎಂದು ಕ್ಷೇತ್ರದ ಕಾಂಗ್ರೆಸ್​​ ನಾಯಕರು ಕನಸು ಕಾಣ್ತಿದ್ದಾರೆ ಎಂಬ ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಡೀ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಂತಾನೇ ಹೇಳಲಿ ನಮ್ಮದು ಅಭ್ಯಂತ್ರವಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಓದಿ-ಮುಂಬೈನ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ

ನಮಗೆ ಯಾವುದೇ ಬೇಜಾರಿಲ್ಲಾ.. ನಾನು ಯಾವುದೇ ಕೋರ್ಟ್​ಗೆ ಲೀಗಲ್ ಅಪ್ಲಿಕೇಶನ್ ಹಾಕಲ್ಲಾ‌‌. ಅವರೆಲ್ಲಾ ದೊಡ್ಡ ದೊಡ್ಡ ಪಿಹೆಚ್‌ಡಿ ಪಡೆದವರು, ಬುದ್ಧಿವಂತರಿದ್ದಾರೆ. ಅವರ ವಿರುದ್ದ ನಾವು ಯಾವತ್ತೂ ಸಮರ್ಥರು ಅಂತಾ ಹೇಳಿಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.

ಮಂಡ್ಯ ಜಿಲ್ಲೆಯ 252 ಗ್ರಾಪಂ ಜೆಡಿಎಸ್​ದೇ ಅಂದುಕೊಂಡ್ರೂ ಬೇಜಾರಿಲ್ಲಾ. ನಾವು ಯಾವತ್ತು ಪ್ರತಿಭಟನೆ ಮಾಡಿಲ್ಲಾ, ವಿರೋಧವನ್ನು ಮಾಡಿಲ್ಲಾ. ಕಾಂಗ್ರೆಸ್​ದು ಎಲ್ಲಾ ಜೀರೋ, ನಾನೇ ಡಿಕ್ಲೇರ್ ಮಾಡ್ತಿದ್ದೇನೆ ಅಂತಾ ಹೇಳಿ. ಜೆಡಿಎಸ್​ನವರು ಖುಷಿಯಾಗಿರಲಿ ಎಂದು ಪರೋಕ್ಷವಾಗಿ ಸುರೇಶ್​ಗೌಡರಿಗೆ ಚಲುವರಾಯಸ್ವಾಮಿ ಟಾಂಗ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.