ETV Bharat / state

ನಮ್ಮನ್ನು ಮನೆಗೆ ಹೋಗಲು ಬಿಟ್ಟುಬಿಡಿ: ಸೌಲಭ್ಯವಿಲ್ಲದೇ ಸೋಂಕಿತರಿಗೆ ಸಂಕಷ್ಟ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲು ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸದ ಪರಿಣಾಮ ಸೋಂಕಿತರು ನಮ್ಮನ್ನು ಇಲ್ಲಿಂದ ಬಿಡುಗಡೆಗೊಳಿಸಿ ಎಂದು ಅಧಿಕಾರಿಗಳ ಬಳಿ ಬೇಡಿಕೊಂಡಿದ್ದಾರೆ.

ಸೌಲಭ್ಯವಿಲ್ಲದೇ ಸೋಂಕಿತರ ಅಳಲು
ಸೌಲಭ್ಯವಿಲ್ಲದೇ ಸೋಂಕಿತರ ಅಳಲು
author img

By

Published : Jun 1, 2021, 7:47 PM IST

ಮಂಡ್ಯ: ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿ ಸೋಂಕಿತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.

ಸೌಲಭ್ಯವಿಲ್ಲದೇ ಸೋಂಕಿತರ ಅಳಲು

ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲು ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಆದಷ್ಟು ಬೇಗ ಗುಣಮುಖರಾಗುತ್ತೀರಿ ಎಂದು ಸುಳ್ಳು ಭರವಸೆ ನೀಡಿ ಇಲ್ಲಿಗೆ ಕರೆ ತಂದಿದ್ದಾರೆ.

ಆದರೆ, ಇಲ್ಲಿ ಏನೂ ಇಲ್ಲ, ನಮ್ಮ ಮಗು ಕಳೆದ ಮೂರು ದಿನದಿಂದ ಕೆಮ್ಮಿನಿಂದ ನರಳುತ್ತಿದೆ. ಔಷಧ ಕೇಳಿದರೂ ಆರೋಗ್ಯ ಇಲಾಖೆ ಸಿಬ್ಬಂದಿ ನೀಡುತ್ತಿಲ್ಲ. ಶೌಚಾಲಯಗಳು ದುರ್ನಾತ ಬೀರುತ್ತಿವೆ. ಶುದ್ಧ ಕುಡಿಯವ ನೀರು ಸಹ ಇಲ್ಲ. ದಯವಿಟ್ಟು ನಮ್ಮನ್ನು ಮನೆಗೆ ಕಳುಹಿಸಿದರೆ ಕೊರೊನಾ ಮಾರ್ಗಸೂಚಿಯ ಪ್ರಕಾರವೇ ಊಟ, ಔಷಧೋಪಚಾರ ಮಾಡಿಕೊಂಡು ಗುಣಮುಖರಾಗುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಸೋಂಕಿತರು ಮನವಿ ಮಾಡಿಕೊಂಡಿದ್ದಾರೆ.
ಚಿತಾಗಾರದಲ್ಲೇ ಉಳಿದ ಕೋವಿಡ್ ಮೃತದೇಹಗಳ ಚಿತಾಭಸ್ಮ: ಕುಟುಂಬಸ್ಥರಿಂದ ನೋ ರೆಸ್ಪಾನ್ಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.