ETV Bharat / state

ನಾಗಮಂಗಲ ಸುರೇಶ್‌ಗೌಡರಿಗೆ ಸಚಿವ ನಾರಾಯಣಗೌಡ, ಸಂಸದೆ ಸುಮಲತಾ ಅಂಬಿ ತಿರುಗೇಟು..

ಸಕ್ಕರೆ ನಾಡಿನಲ್ಲಿ ಕ್ವಾರಂಟೈನ್‌ ಕೇಂದ್ರದ ವಿಚಾರಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಮಧ್ಯೆ ಪರಸ್ಪರ ಕೆಸರೆರಚಾಟ ನಡೆದಿದೆ..

Narayana Gowda and Sumalatha took class against JDS leaders at Mandya
ಸಚಿವ ನಾರಾಯಣಗೌಡ
author img

By

Published : May 10, 2020, 8:57 PM IST

ಮಂಡ್ಯ : ಕ್ವಾರಂಟೈನ್ ಕೇಂದ್ರ ಆಯ್ಕೆ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಜೆಡಿಎಸ್ ಶಾಸಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದರು.

ಪ್ರತ್ಯೇಕವಾಗಿ ಮಾಧ್ಯಮಗಳ ಜೊತೆ ಮಾತನಾಡಿರುವ ಇಬ್ಬರೂ ಜನಪ್ರತಿನಿಧಿಗಳು, ವಿರೋಧ ಮಾಡುವವರಿಗೆ ಪ್ರಶ್ನೆ ಮಾಡಿ, ನಿಮ್ಮ ಊರಿನಲ್ಲೇ ಕೊರೊನಾ ಕಾಣಿಸಿಕೊಂಡರೆ ಏನು ಮಾಡ್ತೀರಾ? ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಸಲಹೆ ನೀಡಿದ್ದಾರೆ.

ಜೆಡಿಎಸ್ ಶಾಸಕರಿಗೆ ತಿರುಗೇಟು ನೀಡಿದ ಸಚಿವ, ಸಂಸದೆ..

ಜಿಲ್ಲೆಯಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ, ಬಾಂಬೆಯಿಂದ ಬಂದಿರೋರು ನಾಗಮಂಗಲ ಶಾಸಕ ಸುರೇಶ್‌ಗೌಡರ ಸ್ನೇಹಿತರೇ ಆಗಿದ್ದಾರೆ. ಅವರ ಹೆಸರೂ ಕೂಡ ಸುರೇಶ್‌ ಗೌಡ. ನನ್ನ ಕ್ಷೇತ್ರದಲ್ಲಿ ಅವರಿಗಿಂತ ಹೆಚ್ಚಿನ ಹಾಸ್ಟೆಲ್​ಗಳನ್ನ ನಿರ್ಮಾಣ ಮಾಡಲಾಗಿದೆ. ಆದರೆ, ಅವರು ಕ್ವಾರಂಟೈನ್ ಕೇಂದ್ರದ ವಿಚಾರವಾಗಿ ತಪ್ಪು ಮಾಡಿದ್ದು ಸರಿಯಲ್ಲ ಎಂದರು.

ಸಂಸದೆ ಸುಮಲತಾ ಅಂಬರೀಶ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿ, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವ ಜವಾಬ್ದಾರಿಯುತ ಸ್ಥಾನದಲ್ಲಿ ನಾವಿದ್ದೇವೆ. ನಾವೇ ಜನರಿಗೆ ತಪ್ಪು ಮಾಹಿತಿ ನೀಡಿದರೆ ಹೇಗೆ ಎಂದು ಜೆಡಿಎಸ್ ನಾಯಕರ ಕ್ವಾರಂಟೈನ್ ಕೇಂದ್ರ ವಿರೋಧಕ್ಕೆ ಪ್ರಶ್ನೆ ಹಾಕಿ, ಏನೋನೋ ಊಹೆ ಮಾಡಿಕೊಂಡು ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.