ETV Bharat / state

ಮಂಡ್ಯ ಜಾನಪದ ಕಲಾವಿದನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​: ಅಕ್ಕನ ಸಾವಿಗೆ ಪ್ರತೀಕಾರ ತೀರಿಸಿಕೊಂಡ ತಮ್ಮ! - ಮಡ್ಯ ಕ್ರೈಮ್​

ಮಂಡ್ಯದಲ್ಲಿ ಜಾನಪದ ಕಲಾವಿದನ ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಈ ಕೊಲೆ ಕೇಸ್​ ಸಂಬಂಧ ಬಂಧನಕ್ಕೊಳಗಾಗಿದ್ದ ಬಾಲಕನು ತನ್ನ ಅಕ್ಕನ ಸಾವಿಗೆ ಕಾರಣವಾಗಿದ್ದ ಎನ್ನಲಾದ ಜಾನಪದ ಕಲಾವಿದನನ್ನು ಹೆಣ ಉರುಳಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

murder accused juvenile arrested
ಅಕ್ಕನ ಪ್ರೇಮಿಯ ಕೊಂದ ತಮ್ಮ
author img

By

Published : Jun 1, 2020, 11:08 AM IST

Updated : Jun 1, 2020, 11:39 AM IST

ಮಂಡ್ಯ: ಜಾನಪದ ಕಲಾವಿದನ ಬರ್ಬರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ತನ್ನ ಅಕ್ಕನ ಸಾವಿಗೆ ಪ್ರತೀಕಾರವಾಗಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಮೇ 28 ರಂದು ಕತ್ತು ಕುಯ್ದು ಜಾನಪದ ಕಲಾವಿದನ ಬರ್ಬರ ಹತ್ಯೆ ನಡೆದಿತ್ತು. ಎರಡೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿ 17 ವರ್ಷದ ಅಪ್ರಾಪ್ತ ಯುವಕನಾಗಿದ್ದು, ಕೆ.ಎಂ. ದೊಡ್ಡಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಮಂಡ್ಯದಲ್ಲಿ ಜಾನಪದ ಕಲಾವಿದನ ಕತ್ತು ಸೀಳಿ ಕೊಲೆ: ದುಷ್ಕರ್ಮಿಗಳು ಪರಾರಿ!

ಪ್ರತೀಕಾರಕ್ಕೆ ಹತ್ಯೆ:

ಆರೋಪಿ ತನ್ನ ಅಕ್ಕನ ಸಾವಿಗೆ ಕಾರಣನಾಗಿದ್ದ ರಘುವಿನ‌ ಮೇಲಿನ ದ್ವೇಷದಿಂದ ಈ ರೀತಿ ಕೃತ್ಯ ಎಸಗಿರೋದಾಗಿ ಪೊಲೀಸರ ಬಳಿ ವಿಚಾರಣೆ ವೇಳೆ ತಿಳಿಸಿದ್ದಾನೆ. 5 ವರ್ಷದ ಹಿಂದೆ ಆರೋಪಿಯ ಅಕ್ಕನನ್ನು ರಘು ಪ್ರೀತಿಸುತ್ತಿದ್ದ. ಮನೆಯವರು ಮದುವೆಗೆ ಒಪ್ಪದ ಕಾರಣಕ್ಕೆ ಇಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ರು. ಆ ವೇಳೆ ಆರೋಪಿಯ ಅಕ್ಕ ಮೃತಪಟ್ಟಿದ್ರೆ ರಘು ಸಾವಿನಿಂದ ಪಾರಾಗಿದ್ದ. ಇನ್ನು ತನ್ನ ಅಕ್ಕನ ಸಾವಿಗೆ ರಘುನೇ ಕಾರಣನೆಂದು ದ್ವೇಷ ಸಾಧಿಸಿದ ಆರೋಪಿ ಅಪ್ರಾಪ್ತ ಬಾಲಕ ರಘುವನ್ನು‌ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Last Updated : Jun 1, 2020, 11:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.