ETV Bharat / state

ಫುಟ್​ಪಾತ್ ಒತ್ತುವರಿ ತೆರವು: ಅಧಿಕಾರಿಗಳ ಕ್ರಮಕ್ಕೆ ವ್ಯಾಪಾರಿಗಳ ಆಕ್ರೋಶ - ಮಂಡ್ಯದ ಕೆಆರ್​ ಪೇಟೆ ಸುದ್ದಿ

ಇಂದು ಪಾಂಡವಪುರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕೆ.ಆರ್.ಪೇಟೆಯ ಸಾದೊಳಲು, ಕಿಕ್ಕೇರಿ ರಸ್ತೆಯಲ್ಲಿ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.

footPath Clearance operation, ಫುಟ್​ಪಾತ್ ಒತ್ತುವರಿ ತೆರವು ಕಾರ್ಯಚರಣೆ
author img

By

Published : Nov 8, 2019, 9:06 PM IST

ಮಂಡ್ಯ: ಪುರಸಭೆ ಹಾಗೂ ಕಂದಾಯ ಅಧಿಕಾರಿಗಳು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಟ್ಟಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

ಪಾಂಡವಪುರ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಕೆ.ಆರ್.ಪೇಟೆಯ ಸಾದೊಳಲು, ಕಿಕ್ಕೇರಿ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ತೆರವುಗೊಂಡ ಸ್ಥಳದಲ್ಲಿ ಮತ್ತೆ ಅಂಗಡಿಗಳನ್ನು ಹಾಕಿದರೆ ವಶಕ್ಕೆ ಪಡೆಯುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಇನ್ನು ಅಧಿಕಾರಿಗಳು ಜೆಸಿಬಿ ತಂದು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಕೆಲ ವರ್ತಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಬಗ್ಗದ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರೆಸಿದರು.

ಅಧಿಕಾರಿಗಳ ಕ್ರಮದಿಂದ ಬೇಸತ್ತ ವ್ಯಾಪಾರಿಗಳು ಕೆಲ ಕಾಲ ಪ್ರತಿಭಟನೆ ಮಾಡಿದರು. ನೋಟಿಸ್ ನೀಡದೆ ತೆರವು ಕಾರ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

Intro:ಮಂಡ್ಯ: ಪುರಸಭೆ ಹಾಗೂ ಕಂದಾಯ ಅಧಿಕಾರಿಗಳು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದರು. ಪಾಂಡವಪುರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತೆರವು ಮಾಡಲಾಯಿತು.
ಕೆ.ಆರ್.ಪೇಟೆಯ ಸಾದೊಳಲು, ಕಿಕ್ಕೇರಿ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ಮತ್ತೆ ಅಂಗಡಿಗಳನ್ನು ಹಾಕಿದರೆ ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಜೆಸಿಬಿ ತರುತ್ತಿದ್ದಂತೆ ಕೆಲ ವರ್ತಕರು ವಿರೋಧ ವ್ಯಕ್ತಪಡಿಸಿದರು. ವ್ಯಾಪಾರಿಗಳ ವಿರೋಧದ ನಡೆಯುವೆಯೂ ಅಧಿಕಾರಿಗಳು ತೆರವು ಮಾಡಿದರು. ರಸ್ತೆಗೆ ಹಾಕಿದ್ದ ಶೆಡ್ ಹಾಗೂ ಶೀಟ್ ಗಳನ್ನು ತೆರವು ಮಾಡಿ, ಗೋಡೆಗಳನ್ನು ಕೆಡವಿದರು.
ಅಧಿಕಾರಿಗಳ ಕ್ರಮದಿಂದ ಬೇಸತ್ತ ವ್ಯಾಪಾರಿಗಳು ಕೆಲವೊತ್ತು ಪ್ರತಿಭಟನೆಯನ್ನೂ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನೋಟಿಸ್ ನೀಡದೇ ತೆರವು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕೆಲ ಸಮಯ ರಸ್ತೆ ತಡೆ ಮಾಡಿದರು.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.