ಮಂಡ್ಯ: ಮುಂಗಾರು ಮಳೆ ಆರಂಭವಾದ ಹಿನ್ನೆಲೆ ರೈತರಿಗೆ ನೀಡಬೇಕಾದ ಸಾಲದ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಸಂಸದೆ ಸುಮಲತಾ ಅಂಬರೀಶ್ ಮಾಹಿತಿ ಪಡೆದುಕೊಂಡರು.
ಬರೋಡಾ ಬ್ಯಾಂಕ್ ಸ್ವ ಉದ್ಯೋಗ ಕೇಂದ್ರದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಮಾಡಿ, ಸಾಲ ನೀಡುವ ಕುರಿತು ಮಾಹಿತಿ ಹಂಚಿಕೊಂಡರು. ಜಿಲ್ಲಾ ಮಟ್ಟದ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಸಭೆ ಮಾಡಿದ ಸಂಸದೆ ರೈತರಿಗೆ ಬೇಕಾಗಿರುವ ಕೃಷಿ ಸಾಲ ಹಾಗೂ ರಸಗೊಬ್ಬರ ಸಾಲ ಕುರಿತು ಸೂಚನೆ ನೀಡಿದರು.
ರೈತರಿಗೆ ಸಮಸ್ಯೆ ಆಗದ ರೀತಿಯಲ್ಲಿ ಸಾಲ ನೀಡಬೇಕು, ಕಿರುಕುಳ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ವೆಂಕಟೇಶ್, ಕೃಷಿ ಸಾಲದ ಅವಶ್ಯಕತೆ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಜೊತೆಗೆ ಸರ್ಕಾರ ನಿಗಧಿ ಮಾಡಿರುವಷ್ಟು ಸಾಲ ವಿತರಣೆ ಆಗಬೇಕು ಎಂದರು.