ಮಂಡ್ಯ : ಬಟ್ಟೆ ತೊಳೆಯಲು ಹೋಗಿ ಆಯತಪ್ಪಿ ಕೆರೆಯಲ್ಲಿ ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವಿಗೀಡಾದ ಘಟನೆ ನಾಗಮಂಗಲ ತಾಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
![mother-and-daughters-died-in-a-lake](https://etvbharatimages.akamaized.net/etvbharat/prod-images/kn-mnd-02-death-av-7202530_14062020130211_1406f_1592119931_620.jpg)
ಗ್ರಾಮದ ಗೀತಾ ನರಸಿಂಹಯ್ಯ(38) ಹಾಗೂ ಸವಿತ (19), ಸೌಮ್ಯ(14) ಮೃತ ದುರ್ದೈವಿಗಳಾಗಿದ್ದಾರೆ. ಗ್ರಾಮದ ಕೆರೆಗೆ ಬಟ್ಟೆ ಒಗೆಯಲು ಮಕ್ಕಳೊಂದಿಗೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ನೀರಿಗೆ ಬಿದ್ದ ಮಗಳನ್ನ ರಕ್ಷಿಸಲು ಹೋಗಿ ಸಹೋದರಿ ಹಾಗೂ ತಾಯಿ ಕೂಡ ನೀರು ಪಾಲಾಗಿದೆ. ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದದ್ದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕೆರೆಯಲ್ಲಿ ಮುಳುಗಿದ್ದ ಶವಗಳನ್ನು ಹೊರತೆಗೆಯಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.