ಮಂಡ್ಯ : ನಾಗಮಂಗಲದ ಮಾಜಿ ಸಂಸದ ಶಿವರಾಮೇಗೌಡರು ಹಾಗೂ ಜೆಡಿಎಸ್ ಮಹಿಳಾ ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿದ ಆಡಿಯೋ ಇತ್ತೀಚಿಗೆ ವೈರಲ್ ಆಗಿತ್ತು.
ಈ ಸಂಬಂಧ ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆಡಿಯೋ ವಿಚಾರವಾಗಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಆಡಿಯೋಗೂ ಯಾವುದೇ ಸಂಬಂಧವಿಲ್ಲ. ಆಡಿಯೋ ವಿಚಾರವಾಗಿ ಸಿಬಿಐ ತನಿಖೆ ಮಾಡಿಸಿದರೆ ಸತ್ಯ ಹೊರಗೆ ಬರುತ್ತದೆ. ಶಿವರಾಮೇಗೌಡರ ಉಚ್ಛಾಟನೆ ಮಾಡಿರುವುದು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ. ಪಕ್ಷಕ್ಕೆ ಉಂಟಾಗುವ ಮುಜುಗರವನ್ನು ತಪ್ಪಿಸಲು ಪಕ್ಷದ ವರಿಷ್ಠರು ಕ್ರಮ ಕೈಗೊಂಡಿದ್ದಾರೆ ಎಂದರು.
ಇದನ್ನು ಸಿಬಿಐ ತನಿಖೆ ನಡೆಸಿದರೆ ಯಾರಿಂದ ಈ ಆಡಿಯೋ ಬಂದಿದೆ. ಆ ಮಹಿಳೆ ಮಾಡಿದ್ದಾರಾ ಅಥವಾ ಅವರ ಪಿಎ ಮಾಡಿದ್ದಾರಾ, ಕಾಂಗ್ರೆಸ್ನವರು ಮಾಡಿದ್ದಾರಾ, ದಳದವರು ಮಾಡಿದ್ದಾರಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಇದರಿಂದ ನನಗೆ ಯಾವುದೇ ತೇಜೊವಧೆ ಇಲ್ಲ ಎಂದರು.
ಚುನಾವಣಾ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತಗೆದುಕೊಳ್ಳುತ್ತಾರೆ. ಚುನಾವಣೆ ಬರುವ ಸಂದರ್ಭದಲ್ಲಿ ಟಿಕೆಟ್ ಕೇಳುವುದು ತಪ್ಪೇನಿಲ್ಲ. ಆ ಮಹಿಳೆ ನಮ್ಮ ಪಕ್ಷದ ಕಾರ್ಯಕರ್ತೆ, ಪರಿಚಯವಿದ್ದಾರೆ. ಎಲ್ಲಿ ಬೇಕಾದ್ರು ಪ್ರಮಾಣ ಮಾಡ್ತೇನೆ.
ನನಗೆ ಲಾಭನೂ ಇಲ್ಲ, ನಷ್ಟನೂ ಇಲ್ಲ. ನಾನು ಅವರ ಮೇಲೆ ಡಿಪೆಂಡ್ ಆಗಿರಲಿಲ್ಲ. ಮಾದೇಗೌಡ್ರು ಅವರದೇ ಆದ ಹೋರಾಟ ಮಾಡಿ ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರು ಇವತ್ತು ನಮ್ಮ ಮುಂದೆ ಇಲ್ಲ. ಇಂತಹ ಸಂದರ್ಭದಲ್ಲಿ ಅವರ ಬಗ್ಗೆ ಚರ್ಚೆ ಮಾಡಿದ್ದು, ಸರಿಯಲ್ಲ. ಶಿವರಾಮೇಗೌಡರು ಮಾಡಿರುವ ತಪ್ಪಿಗೆ ನನ್ನ ಕೈವಾಡ ಇಲ್ಲ ಎಂದರು.
ಇದನ್ನೂ ಓದಿ: ದಿ. ಮಾದೇಗೌಡರ ಬಗ್ಗೆ ಅವಹೇಳನ : ಜೆಡಿಎಸ್ನಿಂದ ಶಿವರಾಮೇಗೌಡ ಉಚ್ಚಾಟನೆ