ETV Bharat / state

ರಾಜ್ಯಾದ್ಯಂತ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್ ವಿಧಿಸಿ; ಶಾಸಕ ಡಾ. ಕೆ. ಅನ್ನದಾನಿ ಒತ್ತಾಯ - ಮಂಡ್ಯ ಕೊರೊನಾ ಪ್ರಕರಣಗಳು

ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿದ ಸಲಹೆ ಸ್ವೀಕರಿಸಲಿ. ಇದರಿಂದ ಸರ್ಕಾರಕ್ಕೂ ಒಳ್ಳೆಯದು. ಸಂಪೂರ್ಣ ಲಾಕ್​ಡೌನ್ ಮಾಡಲಿ. ಭಾನುವಾರ ಮಾತ್ರ ಲಾಕ್​ಡೌನ್ ಮಾಡಿದರೆ ಪ್ರಯೋಜನ ಇಲ್ಲ. ಸ್ವಲ್ಪ ದಿನದ ಮಟ್ಟಿಗೆ ಮತ್ತೆ ಲಾಕ್​ಡೌನ್ ಮಾಡಿದರೆ ಸೂಕ್ತ. ಇದರಿಂದ ಸೋಂಕು ಸಮುದಾಯಕ್ಕೆ ಹರಡುವುದನ್ನ ತಪ್ಪಿಸಬಹುದು ಎಂದು ಶಾಸಕ ಡಾ. ಕೆ. ಅನ್ನದಾನಿ ಹೇಳಿದರು.

mla-k-annadani-statement-on-state-lock-down
ಶಾಸಕ ಡಾ ಕೆ ಅನ್ನದಾನಿ
author img

By

Published : Jul 5, 2020, 12:10 AM IST

Updated : Jul 5, 2020, 12:16 AM IST

ಮಂಡ್ಯ: ಕೊರೊನಾ ಸಮುದಾಯಕ್ಕೆ ಹರಡಿದ್ದು, ಜನರು ಎಚ್ಚರಿಯಿಂದ ಇರುವಂತೆ ಶಾಸಕ ಡಾ. ಕೆ. ಅನ್ನದಾನಿ ಮನವಿ ಮಾಡಿದರು.

ಈಗಾಗಲೇ ಮಳವಳ್ಳಿ ತಾಲೂಕಿನ 13 ಹಳ್ಳಿಗಳಿಗೆ ಸೋಂಕು ಹರಡಿದೆ. ಸಮುದಾಯಕ್ಕೆ ಹಬ್ಬಿರುವುದು ಇದಕ್ಕೆ ಕಾರಣ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಕಾರ್ಯೋನ್ಮುಖರಾಗುತ್ತೇವೆ. ಸರ್ಕಾರ ಈ ವಿಚಾರ ಅಲ್ಲಗಳೆಯಬಾರದು. ಹಳ್ಳಿ- ಹಳ್ಳಿಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದು ಸಮುದಾಯಕ್ಕೆ ಹರಡಿದಂತೆ ಅಲ್ಲವಾ ಎಂದು ಪ್ರಶ್ನಿಸಿದರು.

ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಡಾ. ಕೆ. ಅನ್ನದಾನಿ

ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿದ ಸಲಹೆ ಸ್ವೀಕರಿಸಲಿ. ಇದರಿಂದ ಸರ್ಕಾರಕ್ಕೂ ಒಳ್ಳೆಯದು. ಸಂಪೂರ್ಣ ಲಾಕ್​ಡೌನ್ ಮಾಡಲಿ. ಭಾನುವಾರ ಮಾತ್ರ ಲಾಕ್​ಡೌನ್ ಮಾಡಿದರೆ ಪ್ರಯೋಜನ ಇಲ್ಲ. ಸ್ವಲ್ಪ ದಿನದ ಮಟ್ಟಿಗೆ ಮತ್ತೆ ಲಾಕ್​ಡೌನ್ ಮಾಡಿದರೆ ಸೂಕ್ತ. ಇದರಿಂದ ಸೋಂಕು ಸಮುದಾಯಕ್ಕೆ ಹರಡುವುದನ್ನ ತಪ್ಪಿಸಬಹುದು ಎಂದರು.

35 ಮಂದಿಗೆ ಕೊರೊನಾ

ಜಿಲ್ಲೆಯಲ್ಲಿ ಇಂದು ಅಂತರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಪ್ರವಾಸ ಮಾಡಿದ 35 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. 26 ಮಂದಿ ಪುರುಷರು ಹಾಗೂ 9 ಮಂದಿ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ. ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 508ಕ್ಕೆ ಏರಿಕೆಯಾಗಿದೆ.

Last Updated : Jul 5, 2020, 12:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.