ಮಂಡ್ಯ: ಮಳವಳ್ಳಿ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ಗಿಂತ ಕಾಂಗ್ರೆಸ್ ಒಂದೇ ಒಂದು ಸ್ಥಾನ ಹೆಚ್ಚು ಗಳಿಸಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲ ನೀವು ರಾಜಕೀಯ ನಿವೃತ್ತಿ ಘೋಷಿಸುತ್ತೀರಾ? ಎಂದು ಮಳವಳ್ಳಿ ಶಾಸಕ ಡಾ. ಕೆ ಅನ್ನದಾನಿ ಸವಾಲು ಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಮಾಡಿರುವ ಹತ್ತು ವರ್ಷದ ಸಾಧನೆ ಏನು ಎಂಬುದು ನನಗೆ ಗೊತ್ತಿದೆ ಎಂದು ಮಾಜಿ ಶಾಸಕ ನರೇಂದ್ರಸ್ವಾಮಿಗೆ ಹಾಲಿ ಶಾಸಕ ಅನ್ನದಾನಿ ಟಾಂಗ್ ಕೊಟ್ಟರು.
ನರೇಂದ್ರಸ್ವಾಮಿ ಬರೀ ಸುಳ್ಳು ಹೇಳಿಕೊಂಡು ನಾಟಕ ಆಡಿಕೊಂಡಿದ್ದಾರೆ. ದೊಡ್ಡ ಕೆರೆ, ಮಾರಹಳ್ಳಿ ಕೆರೆಗಳಲ್ಲಿ ನೀವು ಎಷ್ಟು ಅಡಿ ಹೂಳು ತೆಗೆಸಿದ್ದೀರಿ ಹೇಳಿ ನೋಡೋಣ. ನಿಮ್ಮ ದುರಹಂಕಾರ, ಗರ್ವ ಇನ್ನೂ ಹಾಗೆಯೇ ಇದೆ. ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಅನ್ನೋ ಹಾಗೆ ಸೋರುತ್ತಲೆ ಇದೆ ಎಂದು ಅನ್ನದಾನಿ ವಾಗ್ದಾಳಿ ನಡೆಸಿದರು.