ಮಂಡ್ಯ: ನಿರ್ಬಂಧಿತ ಪ್ರದೇಶ ಆಗಿರುವ ಮಳವಳ್ಳಿಯಲ್ಲಿ ಜನರು ಸರ್ಕಾರ ನೀಡುವ ಉಚಿತ ತರಕಾರಿಗಳನ್ನು ಸಚಿವ ನಾರಾಯಣ ಗೌಡರ ಎದುರೇ ನಿಯಮ ಪಾಲನೆ ಮಾಡದೇ ಮುಗಿಬಿದ್ದು ತೆಗೆದುಕೊಂಡು ಹೋದ ಘಟನೆ ನಡೆದಿದೆ.
![Misbehaviour in front of the Minister in Mandya](https://etvbharatimages.akamaized.net/etvbharat/prod-images/kn-mnd-07-vegetables-av-7202530_22042020154906_2204f_1587550746_270.jpg)
ಮಳವಳ್ಳಿಯ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಚಿವರ ಮುಖಾಂತರ ಉಚಿತವಾಗಿ ತರಕಾರಿಯನ್ನು ನೀಡಲಾಗುತ್ತಿತ್ತು. ಸಚಿವರ ಆಗಮನದ ಹಿನ್ನೆಲೆಯಲ್ಲಿ ತರಕಾರಿಗಳನ್ನು ಆಟೋಗಳಲ್ಲಿ ತರಿಸಲಾಗಿತ್ತು. ಸಚಿವರ ತರಕಾರಿಗಳನ್ನು ವಿತರಣೆ ಮಾಡುತ್ತಿದ್ದಂತೆ ಮುಗಿಬಿದ್ದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತಾಮುಂದು ನಾ ಮುಂದು ಎಂಬಂತೆ ತರಕಾರಿಯನ್ನು ತೆಗೆದುಕೊಂಡು ಹೋದರು.
ಮಳವಳ್ಳಿಯಲ್ಲಿ ಈಗಾಗಲೇ 11 ಮಂದಿ ಕೊರೊನಾ ರೋಗಿಗಳು ಇದ್ದಾರೆ. ಕೆಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಮೂರು ಬಡಾವಣೆಗಳನ್ನು ನಿರ್ಬಂಧಿತ ಪ್ರದೇಶ ಎಂದು ಮಾಡಲಾಗಿದೆ. ಆದರೂ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದು ತರಕಾರಿ ಪಡೆದುಕೊಂಡಿದ್ದು ಆತಂಕವನ್ನು ಸೃಷ್ಟಿ ಮಾಡಿದೆ.