ಮಂಡ್ಯ : ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಬಾಗಿನ ಅರ್ಪಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರ ಪತ್ನಿ ಹಾಗೂ ಪುತ್ರಿ ಸಂತಸದಿಂದ ಆನಂದಭಾಷ್ಪ ಸುರಿಸಿದ ಘಟನೆ ನಡೆಯಿತು.
ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಹಿಳೆಯರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಚಿವ ಕೆ ಸಿ ನಾರಾಯಣ ಗೌಡ ಮಾತನಾಡಿ, ನನ್ನ ಸಾಧನೆಗೆ ಪತ್ನಿ, ಪುತ್ರಿಯರ ಶಕ್ತಿಯೇ ಕಾರಣ. ಅವರ ಆಸೆಯಂತೆ ಇಂದು ಸಹೋದರಿಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದೇನೆ.
ನನ್ನ ಅಮ್ಮನ ಬಳಿಕ ಪತ್ನಿ, ಪುತ್ರಿಯ ಕಾಳಜಿಯನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದು ಭಾವುಕರಾದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ನಾರಾಯಣ ಗೌಡ ಅವರ ಪತ್ನಿ ದೇವಕಿ, ಪುತ್ರಿ ಲೀನಾ ಆನಂದಭಾಷ್ಪ ಸುರಿಸಿದರು.
ಸಂಪ್ರದಾಯದಂತೆ ಸಚಿವರು ಇಂದು 500ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಿದರು. ಸೀರೆ ಜೊತೆಗೆ ಅರಿಶಿಣ ಕುಂಕುಮ, ಹೂ ಮತ್ತು ಬಾಗಿನ ನೀಡಿ ಮಹಿಳೆಯರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಮುಖಂಡ ಸಿದ್ದರಾಮಯ್ಯ ಸೇರಿದಂತೆ ಇತರರು ಭಾಗಿಯಾಗಿದ್ದರು.
![minister-narayana-gowda-wife-and-daughter-cried](https://etvbharatimages.akamaized.net/etvbharat/prod-images/kn-mnd-07-04-mahileyarige-bagina-nidida-minister-pkg-ka10026_07092021185207_0709f_1631020927_299.jpg)
ನಾವೆಲ್ಲ ನಮ್ಮ ಅಣ್ಣನ ಕೈ ಬಲಪಡಿಸಬೇಕು
ನಮ್ಮ ಕುಟುಂಬದ ಅಣ್ಣನಾಗಿ ಸಚಿವರು ನಮಗೆ ಬಾಗಿನ ನೀಡ್ತಿದ್ದಾರೆ. ಸಹೋದರಿಯರಾಗಿ ನಾವೆಲ್ಲ ಅಣ್ಣ ಕೆ ಸಿ ನಾರಾಯಣ ಗೌಡರ ಪರ ನಿಂತುಕೊಳ್ಳಬೇಕಿದೆ. ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ಬಿಜೆಪಿ ಕೈ ಬಲಪಡಿಸಿಬೇಕಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ನಿಶ್ಚಿತಾ ಅವರು ಹೇಳಿದ್ರೆ, ಸಚಿವ ನಾರಾಯಣ ಗೌಡರ ಶ್ರಮಕ್ಕೆ ಫಲವಾಗಿ ಜಿಲ್ಲೆಯಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸುವಂತೆ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಕರೆ ನೀಡಿದ್ರು.