ಮಂಡ್ಯ: ರೈತರಿಗೆ ಜಿಲ್ಲಾ ಹಾಲು ಒಕ್ಕೂಟ ಬಂಪರ್ ಗಿಫ್ಟ್ ಕೊಟ್ಟಿದೆ. ಮನ್ಮುಲ್ ಪ್ರತಿ ಲೀಟರ್ಗೆ 3.50 ರೂಪಾಯಿ ಹೆಚ್ಚಳ ಮಾಡಿದ್ದು, ಹೊಸ ವರ್ಷದಿಂದ ಹೊಸ ದರ ಜಾರಿಗೆ ಬರಲಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಮನ್ಮುಲ್ ಅಧ್ಯಕ್ಷ ಬಿ. ಆರ್. ರಾಮಚಂದ್ರ ಅವರು, ಹೊಸ ದರದಿಂದ ರೈತರಿಗೆ ಪ್ರತಿ ಲೀಟರ್ಗೆ 28.50 ರೂಪಾಯಿ ಸಿಗಲಿದೆ. ಸಹಕಾರಿ ಸಂಘಗಳಿಗೆ ನಿರ್ವಹಣಾ ವೆಚ್ಚವಾಗಿ ಹೆಚ್ಚುವರಿಯಾಗಿ 10 ಪೈಸೆಯನ್ನು ಹೆಚ್ಚಳ ಮಾಡಲಾಗಿದೆ ಎಂದರು.
ಸದ್ಯ ಲೀಟರ್ ಹಾಲಿಗೆ 25 ರೂ. ಮಾತ್ರ ಸಿಗುತ್ತಿತ್ತು. ಈಗ ದರ ಹೆಚ್ಚಳದಿಂದ ರೈತರಿಗೆ ಸಂತಸ ಮೂಡಿಸಿದೆ. ಮೆಗಾ ಡೈರಿ ಯೋಜನೆಯಡಿ ಹಾಲಿನ ದರವನ್ನು ಹಿಂದಿನ ಆಡಳಿತ ಮಂಡಳಿ ಕಡಿತ ಮಾಡಿತ್ತು. ಹೊಸ ಆಡಳಿತ ಮಂಡಳಿ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ ಗಿಫ್ಟ್ ನೀಡಿದೆ.