ಮಂಡ್ಯ: ಸುಮಲತಾ ಅಂಬರೀಶ್ ಅವರನ್ನು ಟೀಕೆ ಮಾಡಿದ್ದ ದಳಪತಿಗಳ ವಿರುದ್ಧ ಕೆ.ಆರ್.ಪೇಟೆ ತಾಲೂಕಿನ ಮೈಗೋನಹಳ್ಳಿಯ ಮಹಿಳೆಯರು ಆಕ್ರೋಶಗೊಂಡಿದ್ದಾರೆ.
ಸುಮಲತಾ ಅಂಬರೀಶ್ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಮಹಿಳೆಯರು ರೇವಣ್ಣ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ರೇವಣ್ಣ ಅವರ ಮಾತಿಂದ ನಮಗೆ ಕಣ್ಣೀರು ಬರಕಿಲ್ವಾ, ನೀವು ಅವರನ್ನು ಯಾಕೆ ಹೀಗೆ ಮಾತಾಡ್ತೀರಾ ಅಂತ ಪ್ರಶ್ನೆ ಮಾಡ್ಬೇಕು ಎಂದು ಸುಮಲತಾ ಮುಂದೆ ಮಹಿಳೆಯರು ಅಳಲು ತೋಡಿಕೊಂಡರು.
ಈ ವೇಳೆ ಮಹಿಳೆಯರಾದ ನೀವೇ ಇದನ್ನ ಪ್ರಶ್ನೆ ಮಾಡ್ಬೇಕು. ಇದಕ್ಕೆಲ್ಲ ಚುನಾವಣೆಯಲ್ಲಿ ನೀವೇ ಉತ್ತರಕೊಡಬೇಕು ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದರು.