ಮಂಡ್ಯ : ಲಾಕ್ಡೌನ್ಗೆ ಸಕ್ಕರೆನಾಡಿನ ಜನ ಕೇರ್ ಮಾಡದೇ ಯುಗಾದಿ ಆಚರಣೆಗಾಗಿ ಮಾರುಕಟ್ಟೆಯಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೇ ಹೂ-ಹಣ್ಣು, ತರಕಾರಿಗಳ ಖರೀದಿ ಮಾಡಲು ಮುಗಿಬಿದ್ದಿದ್ದಾರೆ.
ದೇವಾಲಯದ ಬಾಗಿಲು ಹಾಕಿದ್ದರೂ ಕೂಡ ಜನರು ದೇಗುಲದತ್ತ ತೆರಳಿ ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ. ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳಲು ಅಂಗಡಿಗೆ ಮುಗಿಬಿದ್ದಿದ್ದಾರೆ. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯುತ್ತಿದೆ.
ಹೆದ್ದಾರಿಯಲ್ಲಿ ಖಾಸಗಿ ವಾಹನಗಳು ಎಗ್ಗಿಲ್ಲದೆ ಓಡಾಟ ಮಾಡುತ್ತಿವೆ. ರಸ್ತೆ ಬದಿ ಕ್ಯಾಂಟೀನ್‌ನಲ್ಲಿ ಟೀ-ಕಾಫಿ ಸೇವೆನೆಗೆ ಗುಂಪು ಗುಂಪಾಗಿ ಜನ ಕೂಡಿದ್ದಾರೆ. ಕೆಲವರು ಊರಿಗೆ ತೆರಳಲು ವಾಹನಗಳ ಹುಡುಕಾಡ್ತಾ ಪರದಾಟ ನಡೆಸುತ್ತಿದ್ದಾರೆ.