ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸದ ನಡುವೆಯೇ ಮೈಷುಗರ್ ಖಾಸಗೀರಣ ಬೇಡ, ಸರ್ಕಾರಿ ಸ್ವಾಮ್ಯದಲ್ಲೇ ನಡೆಯಲಿ ಎಂಬ ಹೋರಾಟ ಶುರುವಾಗಿದೆ.
ಇಷ್ಟು ದಿನ ಧರಣಿ ಮಾಡುತ್ತಿದ್ದ ಹೋರಾಟಗಾರರು ಈಗ ಹೊಸ ಮಾರ್ಗ ಹಿಡಿದಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ತಂತ್ರ ಅನುಸರಿಸಿದ್ದಾರೆ. ಮುಖಂಡರಾದ ಸುನಂದಾ ಜಯರಾಂ, ಕುಮಾರಿ ಸೇರಿದಂತೆ ಹಲವರು ಮೈಷುಗರ್ ಖಾಸಗೀಕರಣ ವಿರೋಧಿಸಿ ಹೋರಾಟ ಆರಂಭ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಭೇಟಿಯಾಗಿ ಒತ್ತಡ ತಂತ್ರ ಅನುಸರಿಸಿದ್ದಾರೆ.
ರಾಜ್ಯ ಸರ್ಕಾರ ಮೈಷುಗರ್ ಖಾಸಗೀರಕರಣ ಅಥವಾ ಒ ಅಂಡ್ ಎಂ ಗೆ ನೀಡಲು ಚಿಂತನೆ ನಡೆಸಿತ್ತು. ಅದರೆ ಇದಕ್ಕೆ ವಿರೋಧ ವ್ಯಕ್ತವಾಗಿದೆ.