ಮಂಡ್ಯ: ಸಾಕು ಪ್ರಾಣಿಗಳನ್ನು ತಿಂದು ರೈತರು, ಜನರಿಗೆ ಆತಂಕವನ್ನುಂಟು ಮಾಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಪಾಂಡವಪುರ ತಾಲೂಕಿನ ದೊಡ್ಡಬೋಗನಹಳ್ಳಿ ಬಳಿ ಕಳೆದ ಒಂದು ತಿಂಗಳಿನಿಂದ ಆಗಾಗ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದ್ದ ಚಿರತೆ, ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಜಮೀನಿನ ಬಳಿ ಮೇಯಲು ಬಿಟ್ಟಿದ್ದ ಕುರಿ, ಮೇಕೆ ಹಾಗೂ ಸಾಕುನಾಯಿಗಳನ್ನು ಕೊಂದು ತಿನ್ನುವ ಮೂಲಕ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು.
ಓದಿ: ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ಮೂವರಿಗೆ ಗಾಯ
ಮೊನ್ನೆಯಷ್ಟೇ ಚಿರತೆ ಸೆರೆ ಹಿಡಿಯಲು ಬೋನಿಡಲಾಗಿತ್ತು. ಇದೀಗ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಈ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.