ETV Bharat / state

'ಡಿಸಿಸಿ' ಮೂಲಕ ಕೊರೊನಾ ನಾಶ: ಮಂಡ್ಯ ವೈದ್ಯನ ಹೊಸ ಪ್ರಯೋಗ!

ದೇಶದಲ್ಲಿ ಕೊರೊನಾ ವೈರಸ್​ ನಿಯಂತ್ರಣಕ್ಕೆ ಹೊಸ ಹೊಸ ಪ್ರಯೋಗ ನಡೆಸಲಾಗುತ್ತಿದ್ದು, ಸದ್ಯ ಮಂಡ್ಯದ ವೈದ್ಯರೊಬ್ಬರು ಕೊರೊನಾ ಸೋಂಕು ನಿಯಂತ್ರಣದ ಕುರಿತು ಕೈಗೊಂಡಿರುವ ಪ್ರಯೋಗದ ಬಗ್ಗೆ ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

mandya-doctor-corona-experiment
ಡಾ ಪ್ರಶಾಂತ್ ಈಶ್ವರ್
author img

By

Published : Jul 25, 2020, 4:11 PM IST

ಮಂಡ್ಯ: ನಗರದ ವೈದರೊಬ್ಬರು ಕೊರೊನಾ ಸೋಂಕು ನಿಯಂತ್ರಣದ ಪ್ರಯೋಗದ ಕುರಿತು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಕೊರೊನಾ ಸೋಂಕು ಕಾಣಿಸಿಕೊಂಡ ಕೂಡಲೇ ಸ್ಯಾನಿಟೈಸರ್ ಮಾಡಿ ಆ ಮನೆಯನ್ನು ಲಾಕ್ ಮಾಡಲಾಗುತ್ತದೆ. ಆದರೆ ಸ್ಯಾನಿಟೈಸರ್​​ ಜೊತೆಗೆ ಸೋಡಿಯಂ ಹೈಪೋಕ್ಲೋರೈಡ್‌ ಲಿಕ್ವಿಡ್​​​ ಮಿಶ್ರಣ ಮಾಡಿ ಉಪಯೋಗಿಸಿದರೆ ಅದರ ವಾಸನೆಗೆ ವೈರಾಣು ನಾಶವಾಗಲಿದೆ ಎನ್ನುತ್ತಾರೆ ಡಾ. ಪ್ರಶಾಂತ್ ಈಶ್ವರ್.

'ಡಿಸಿಸಿ' ಪ್ರಯೋಗದ ಮೂಲಕ ಕೊರೊನಾ ನಾಶ

ಒಂದು ಕೊಠಡಿಗೆ ಈ ದ್ರಾವಣವನ್ನು ಸಿಂಪಡಣೆ ಮಾಡಿ ಅದರಲ್ಲಿ ಸೋಂಕಿತರನ್ನು ಬಿಟ್ಟರೆ ವೈರಾಣು ನಾಶವಾಗಬಹುದು. ಇದನ್ನು ನನ್ನ ಸ್ವಂತ ಅನುಭವದಿಂದ ಕಂಡುಕೊಂಡಿದ್ದೇನೆ. ಸರ್ಕಾರ ಇದರ ಬಗ್ಗೆ ಆಲೋಚನೆ ಮಾಡಿ ಪ್ರಯೋಗ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಈ ವಿಧಾನಕ್ಕೆ ಡಿಸಿಸಿ ಎಂದು ಕರೆದಿದ್ದು, ಅಂದರೆ ಡ್ರಾಪ್ಲೆಟ್ ಚೇಂಬರ್ ಕೇರ್ ಎಂಬ ಹೆಸರನ್ನು ನೀಡಿದ್ದಾರೆ. ಈ ಚೇಂಬರ್‌ಗೆ ಲಿಕ್ವಿಡ್ ಸಿಂಪಡಣೆ ಮಾಡಿ ರೋಗಿಯನ್ನು ಅಲ್ಲಿ ಬಿಡುವ ವಿಧಾನವಾಗಿದೆ.

ಸದ್ಯ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಈ ಪ್ರಯೋಗ ಮಾಡುತ್ತಿದ್ದಾರೆ. ಇದರಿಂದ ಯಾರಿಗೂ ಸಮಸ್ಯೆ ಆಗಿಲ್ಲ. ನನಗೂ ಕೆಮ್ಮು ಮತ್ತು ನೆಗಡಿ ಇತ್ತು. ಈ ದ್ರಾವಣ‌ ಸಿಂಪಡಿಸಿ ರೋಗಿಗಳಿಗೆ ತಪಾಸಣೆ ಮಾಡುತ್ತಿದ್ದೆ. ಸಂಜೆ ವೇಳೆಗೆ ನನ್ನ ಸಮಸ್ಯೆ ಬಗೆಹರಿಯಿತು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.