ಮಂಡ್ಯ: ಜಿಲ್ಲಾಧಿಕಾರಿ ಡಾ. ವೆಂಕಟೇಶ್ ದೀಪಾವಳಿ ಹಬ್ಬವನ್ನು ವೃದ್ಧಾಶ್ರಮದ ಹಿರಿಯರೊಂದಿಗೆ, ಬಾಲ ಮಂದಿರದ ಮಕ್ಕಳೊಂದಿಗೆ ಆಚರಿಸಿ ಸಂಭ್ರಮಿಸಿದ್ದಾರೆ.
![mandya](https://etvbharatimages.akamaized.net/etvbharat/prod-images/4895516_1109_4895516_1572317069096.png)
ತಮ್ಮ ಮನೆಯಲ್ಲಿ ಹಿರಿಯರಿಗೆ ಗೌರವ ಸಲ್ಲಿಸಿ, ಮಕ್ಕಳಿಗೆ, ಸಣ್ಣದಾದ ಉಡುಗೊರೆ ನೀಡಿ ನೀತಿ ಪಾಠ ಮಾಡಿದರು. ನಗರದ ಜಿಲ್ಲಾಧಿಕಾರಿ ಗೃಹದಲ್ಲಿ ಮಕ್ಕಳೊಂದಿಗೆ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು.
![Mandya](https://etvbharatimages.akamaized.net/etvbharat/prod-images/4895516_92_4895516_1572317031226.png)
ಸಂಭ್ರಮದ ನಂತರ ಮಕ್ಕಳಿಗೆ ಹಾಗೂ ಹಿರಿಯರಿಗೆ ಸಿಹಿ ಹಂಚಿ, ಅಧಿಕಾರಿಗಳೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇವರ ಈ ಮಾದರಿ ಹಬ್ಬಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.