ETV Bharat / state

ನಾಗಮಂಗಲ, ಮಳವಳ್ಳಿಯಲ್ಲೂ ಕೊರೊನಾ ಸೋಂಕಿತರು: ಬೆಚ್ಚಿಬೀಳಿಸುವಂತಿದೆ ತಹಶೀಲ್ದಾರ್​ ಆದೇಶ ಪತ್ರ - Corona Positive in Mandya District

ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಮಳವಳ್ಳಿಯ ಕೆಲವರಿಗೆ ಕೊರೊನಾ ಇರುವುದು ಪತ್ತೆಯಾದ ಬಗ್ಗೆ ಕೆ. ಆರ್. ಪೇಟೆ ತಹಶೀಲ್ದಾರರ ಪತ್ರ ದೃಢಪಡಿಸಿದ್ದು, ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

Letter from Tahsildar confirmed covid-19  in Mandya district
ಜಿಲ್ಲೆಯಲ್ಲಿ ಕಾಣಿಸಿಕೊಂಡಿತಾ ಕೊರೊನಾ; ತಹಶೀಲ್ದಾರರ ಪತ್ರದಲ್ಲಿ ಏನಿದೆ
author img

By

Published : Apr 5, 2020, 8:21 AM IST

ಮಂಡ್ಯ: ಕೆ. ಆರ್. ಪೇಟೆ ತಹಶೀಲ್ದಾರರ ಪತ್ರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದು, ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

Letter from Tahsildar confirmed covid-19  in Mandya district
ತಹಶೀಲ್ದಾರರ ಪತ್ರ

ನಾಗಮಂಗಲ ಹಾಗೂ ಮಳವಳ್ಳಿಯ ಕೆಲವರಿಗೆ ಕೊರೊನಾ ಇರುವುದು ಪತ್ತೆಯಾದ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಆದೇಶ ಪತ್ರದಲ್ಲಿ ಕೊರೊನಾ ಸೋಂಕು ದೃಢವಾದ ವ್ಯಕ್ತಿಗಳು ಕೆ. ಆರ್. ಪೇಟೆಯ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆ ಎಲ್ಲಾ ವಹಿವಾಟನ್ನು ನಿಷೇಧ ಮಾಡಿಬೇಕಾಗಿ ಆದೇಶ ಹೊರಡಿಸಿದ್ದಾರೆ. ಬೇಕರಿ, ಕ್ಷೌರಿಕ ಅಂಗಡಿ, ಮೀನ್ ಸ್ಟಾಲ್ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ಬಂದ್ ಮಾಡಲು ಆದೇಶಿಸಿದ್ದಾರೆ.

ಈ ಆದೇಶ ಮುನ್ನೆಚ್ಚರಿಕೆ ಕ್ರಮವಾಗಿ ಮಾಡಲಾಗಿದೆ. ನಿಜಾಮುದ್ದಿನ್‌ ಧರ್ಮ ಪ್ರಚಾರಕರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದ ಬಗ್ಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರು. ಅವರ ಜೊತೆ ಸಂಪರ್ಕ ಹೊಂದಿದ್ದ ಸುಮಾರು‌ 50 ಮಂದಿಯನ್ನು ಐಸೋಲೇಷನ್‌ನಲ್ಲಿ‌ ಇರಿಸಿರುವ ಬಗ್ಗೆ ತಿಳಿಸಿದ್ದರು. ಈಗ ತಹಶಿಲ್ದಾರರ ಪತ್ರ ಸದ್ಯ ಜಿಲ್ಲೆಯಲ್ಲಿ ಕೊರೊನಾ ಕಾಲಿಟ್ಟ ಬಗ್ಗೆ ಎಚ್ಚರಿಕೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.