ಮಂಡ್ಯ: ಸಾವಿಗೀಡಾದ ಚಿರತೆಯ ಶವ ಜಮೀನೊಂದರಲ್ಲಿ ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಸಣ್ಣನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣೇಗೌಡ ಎಂಬುವರ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆಯಾಗಿದ್ದು, ಚಿರತೆ ಸತ್ತಿರುವ ಸುದ್ದಿ ತಿಳಿದು ನೋಡಲು ಜನರು ತಂಡೋಪ ತಂಡವಾಗಿ ತೋಟದ ಬಳಿ ಆಗಮಿಸುತ್ತಿದ್ದಾರೆ. ಚಿರತೆ ಕಳೇಬರದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.