ಮಂಡ್ಯ: ಬಿರುಗಾಳಿಗೆ 50ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿ ರೈತನಿಗೆ ಅಪಾರ ನಷ್ಟವಾದ ಘಟನೆ ಕೆ.ಆರ್. ಪೇಟೆ ತಾಲೂಕಿನ ಹಿರಿಕಳಲೆ ಗ್ರಾಮದಲ್ಲಿ ನಡೆದಿದೆ.
ರೈತ ಮಹಿಳೆ ರಾಜಮ್ಮ ಮಾಕೇಗೌಡ ಎಂಬುವರಿಗೆ ಸೇರಿದ ಸರ್ವೇ ನಂ 262ರಲ್ಲಿ ಬಿರುಗಾಳಿಗೆ 50ಕ್ಕೂ ಹೆಚ್ಚಿನ ತೆಂಗಿನ ಮರಗಳು ಬುಡ ಸಮೇತ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತೆಂಗಿನ ಜೊತೆ ಬಾಳೆ ಬೆಳೆಯೂ ಕೂಡ ನಾಶವಾಗಿದ್ದು, ಅಪಾರ ನಷ್ಟವಾಗಿದೆ. ಐದು ವರ್ಷಗಳ ಹಿಂದೆ ತೆಂಗಿನ ಗಿಡಗಳನ್ನು ಹಾಕಲಾಗಿತ್ತು. ಫಲ ಬಿಟ್ಟು ತೆಂಗಿನ ಫಸಲು ಸಿಗುವ ಸಮಯಕ್ಕೆ ಬಿರುಗಾಳಿಗೆ ಮರಗಳು ಧರೆಗುರುಳಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ರೈತ ಮನವಿ ಮಾಡಿದ್ದಾರೆ.