ಮಂಡ್ಯ: ಆಕ್ಸಿಜನ್ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಇತ್ತ ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿಕೊಳ್ಳಲು ಸಂಬಂಧಿಕರಿಗೆ ಸೂಚನೆ ನೀಡಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಸಕ್ಕರೆ ನಾಡಿನಲ್ಲಿ ದಿನೇ ದಿನೆ ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದು, ಮಂಡ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲವೇ ಗಂಟೆಯಲ್ಲಿ ಆಕ್ಸಿಜನ್ ಖಾಲಿಯಾಗಲಿದೆ. ಈಗಾಗಿ ಕೂಡಲೇ ರೋಗಿಗಳನ್ನು ಕರೆದೊಯ್ಯುವಂತೆ ಸಿಬ್ಬಂದಿ ಬಲವಂತ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲಾಡಳಿತಕ್ಕೂ ತಿಳಿಸಿದ್ರೂ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ರೋಗಿಗಳನ್ನು ಸ್ಥಳಾಂತರಿಸಲು ಸೂಚನೆ ನೀಡಿದ್ದಾರೆ. ರೋಗಿಗಳ ಸಂಬಂಧಿಕರಿಗೆ ಎಲ್ಲಿಗೆ ಕರೆದೊಯ್ಯಬೇಕೆಂಬ ಗೊಂದಲ ಸೃಷ್ಟಿಯಾಗಿದೆ.
ಈಗಲಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಚಾಮರಾಜನಗರ ದುರಂತ ಮರುಕಳಿಸುವ ಆತಂಕ ಎದುರಾಗುತ್ತಿದ್ದು, ಮೈಸೂರಿನಿಂದ ಇಂದು ಬರಬೇಕಿದ್ದ ಆಕ್ಸಿಜನ್ ತಡವಾಗಿರೋದ್ರಿಂದ ಅಧಿಕಾರಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿರುವುದು ವಿಷಾದನೀಯ.