ಮಂಡ್ಯ: ಬಿಜೆಪಿಯವರು ಮೊದಲು ಸಿದ್ದರಾಮಯ್ಯನವರ ದಾಖಲೆಗಳಿಗೆ ಉತ್ತರ ನೀಡಲಿ. ನಂತರ ನಮ್ಮ ಮೇಲೆ ಆರೋಪ ಹೊರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರ ಹೇಳಿಕೆಗೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಪದವಿ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕರ ಕೈಗೆ ದುಡ್ಡು ಕೊಡದ ಕಾರಣ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸುತ್ತಿಲ್ಲ. ಅವರಿಂದ ಹಣದ ಬೇಡಿಕೆನೇ ಜಾಸ್ತಿ ಇತ್ತು. 18 ಕೋಟಿ ರೂ ಹಣವನ್ನು ಕೋವಿಡ್ಗಾಗಿ ಮಾತ್ರ ಬಳಸುವುದಾಗಿ ನಾರಾಯಣ ಗೌಡ ಹೇಳಿದ್ದರು. ಈ ಮಾತಿಗೆ ಕೋಪಗೊಂಡ ಶಾಸಕ ರವೀಂದ್ರ, ಯಾರಿಗೆ ಬೇಕು ದುಡ್ಡು? ಮೊದಲು ಬೆಂಗಳೂರಿನ ವಾತಾವರಣ ತಿಳಿಗೊಳಿಸಲಿ, ನಂತರ ನಮ್ಮ ಮೇಲೆ ಆರೋಪ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಣಕಾಸು ವಿಚಾರವಾಗಿ ಶಾಸಕರ ಅಸಹಕಾರ; ಸಚಿವರ ಶಾಕಿಂಗ್ ಹೇಳಿಕೆ
ಜೆ.ಕೆ.ಟಯರ್ಸ್ನಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿದೆ. ಸದ್ಯ ಎಲ್ಲರಿಗೂ ಸಾಮೂಹಿಕವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಪ್ರಾಥಮಿಕವಾಗಿ ಶ್ರೀರಂಗಪಟ್ಟಣದಲ್ಲಿ ಚಿಕಿತ್ಸೆ ನೀಡಿ ನಂತರ ಮಿಮ್ಸ್‌ಗೆ ದಾಖಲಿಸಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.