ETV Bharat / state

ಸಕ್ಕರೆ ನಾಡಲ್ಲಿ ಅಕ್ರಮ ಕ್ಯಾಟ್ ಫಿಶ್ ದಂಧೆ: ಕಣ್ಣಿದ್ದು ಕುರುಡಾದ್ರಾ ಅಧಿಕಾರಿಗಳು?

author img

By

Published : Aug 18, 2019, 11:55 PM IST

ಮಂಡ್ಯ ಜಿಲ್ಲೆಯ ಕಾರಸವಾಡಿ ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಆಫ್ರಿಕಾ ಕ್ಯಾಟ್ ಫಿಶ್ ಸಾಗಣೆ ನಡೆಯುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಅಕ್ರಮ ಕ್ಯಾಟ್​ ಫಿಶ್ ದಂಧೆ

ಮಂಡ್ಯ: ಆಫ್ರಿಕಾ ಕ್ಯಾಟ್ ಫಿಶ್ ಕೊಳೆತ ಮಾಂಸ ತಿಂದು ಬಹು ಬೇಗ ಬೆಳೆಯುತ್ತದೆ. ಇದನ್ನು ದೇಶದಲ್ಲಿ ನಿಷೇಧ ಮಾಡಲಾಗಿದ್ದರೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಸಾಕಣೆ ಮಾಡಲಾಗುತ್ತಿದೆ.

ಅಕ್ರಮ ಕ್ಯಾಟ್​ ಫಿಶ್ ದಂಧೆ

ಜಿಲ್ಲಾ ಕೇಂದ್ರದ ಅಣತಿ ದೂರದಲ್ಲಿರುವ ಕಾರಸವಾಡಿ ಗ್ರಾಮದ ರೈತರ ಜಮೀನೊಂದರಲ್ಲಿ ನಿಷೇಧಿತ ಕ್ಯಾಟ್ ಫಿಶ್​ಗಳನ್ನು ಸಾಕಲಾಗುತ್ತಿದೆ. ಎರಡು ಎಕರೆ ಜಮೀನನ್ನು ಅನಾಮಧೇಯ ವ್ಯಕ್ತಿವೋರ್ವ ಲೀಸ್‌ಗೆ ಪಡೆದು ಮಾರಾಟಕ್ಕಾಗಿ ಇವುಗಳನ್ನು ಬೆಳೆಸುತ್ತಿದ್ದಾರೆ.

ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು. ನಿಷೇಧಿತ ಮೀನುಗಳ ವಶಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Intro:ಮಂಡ್ಯ: ಆಫ್ರಿಕಾದ ಕ್ಯಾಟ್ ಪಿಶ್ ನಿಮ್ಗೆ ಗೊತ್ತಿರಬೇಕು. ಎಲ್ಲಾ ಕೊಳತ ವಸ್ತುಗಳನ್ನು ತಿಂದು ಬಹು ಬೇಗ ಬೆಳೆಯುವ ಮೀನು. ಈ ಮೀನು ತಿಂದರೆ ಮಾನವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಇದನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ಆದರೂ ಜಿಲ್ಲೆಯಲ್ಲಿ ನಿಷೇಧಿತ ಕ್ಯಾಟ್ ಫಿಶ್ ದಂಧೆ ಸದ್ದಿಲದೆ ನಡೀತ್ತಿದೆ‌. ಅಮಾಯಕ ರೈತರಿಂದ ಜಮೀನನ್ನು ಲೀಸ್ ಗೆ ಪಡೆದು ಕ್ಯಾಟ್ ಪಿಶ್ ಸಾಕಾಣೆ ಮಾಡಲಾಗುತ್ತಿದೆ‌.
ಹೌದು, ಜಿಲ್ಲಾ ಕೇಂದ್ರದ ಅಣತಿ ದೂರದಲ್ಲಿರುವ ಕಾರಸವಾಡಿ ಗ್ರಾಮದ ರೈತರ ಜಮೀನೊಂದರಲ್ಲಿ ನಿಷೇಧಿತ ಕ್ಯಾಟ್ ಫಿಶ್ ಗಳನ್ನು ಸಾಕಲಾಗುತ್ತಿದೆ. ಎರಡು ಎಕರೆ ಜಮೀನನ್ನು ಅನಾಮಧೇಯ ವ್ಯಕ್ತಿಯೊಬ್ಬ ಲೀಸ್‌ಗೆ ಪಡೆದು ಸಾಕಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಜಮೀನಿನಲ್ಲಿ ಸರ್ಕಾರಿ ಹಣದಲ್ಲೇ ಹೊಂಡಗಳನ್ನು ನಿರ್ಮಿಸಿ, ಅದ್ರಲ್ಲಿ ಕೋಳಿ ಮತ್ತು ಹಂದಿ ಮಾಂಸದ ತ್ಯಾಜ್ಯಗಳನ್ನು ಆಹಾರವಾಗಿ ನೀಡಿ ಕ್ಯಾಟ್ ಫಿಶ್ ಸಾಕಲಾಗುತ್ತಿದೆ.
ಈ ಮೀನುಗಳು ಪರಿಸರದಲ್ಲಿ ಅಪಾಯಕಾರಿ, ಆರೋಗ್ಯಕ್ಕೆ ಹಾನಿಕಾರಿಕ. ಹೀಗಾಗಿ ಇವುಗಳ ಸಾಕಾಣೆಯನ್ನು ನಿಷೇಧ ಮಾಡಲಾಗಿದೆ.
ಜಿಲ್ಲಾ ಕೇಂದ್ರದ ಸಮೀಪವೇ ಈ ಮೀನುಗಳ ಸಾಕಾಣಿಕೆ ಅಚ್ಚರಿಗೆ ಕಾರಣವಾಗಿದೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಇತ್ತಕಡೆ ಗಮನವನ್ನೂ ಹರಿಸುತ್ತಿಲ್ಲ, ನಿಷೇಧಿತ ಮೀನುಗಳ ವಶಕ್ಕೂ ಮುಂದಾಗಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.Body:ಬೈಟ್
೧. ಹರ್ಷ, ಸ್ಥಳೀಯರು
೨. ಪುಷ್ಪಲತಾ, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ಯತೀಶ್ ಬಾಬು, ಮಂಡ್ಯConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.