ಮಂಡ್ಯ : ಸರ್ಕಾರ ರಮೇಶ್ ಜಾರಕಿಹೊಳಿಯನ್ನ ಬಂಧಿಸಬೇಕು. ಇಲ್ಲದಿದ್ದರೇ ಪ್ರಕರಣವನ್ನು ಸಿಬಿಐ ನೀಡಲು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನ ಅತ್ಯಾಚಾರ ಮಾಡಿದರೂ ಬಂಧಿಸುವುದಿಲ್ಲ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹಾಗಾಗಿ, 24 ಗಂಟೆಯೊಳಗೆ ಸರ್ಕಾರ ರಮೇಶ್ ಜಾರಕಿಹೊಳಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಚುನಾವಣೆ ಗೆಲ್ಲಲು ವಾಮಮಾರ್ಗ ಹಿಡಿಯುವುದು ಸರಿಯಲ್ಲ ಎಂದು ಕಿಡಿಕಾರಿದರು. ಸಿಎಂ ವಿರುದ್ಧ ಈಶ್ವರಪ್ಪ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಎಸ್‌ವೈ ಸಿಎಂ ಆಗಿರಬಹುದು. ಪಕ್ಷ ಸಂಘಟನೆಯಲ್ಲಿ ಈಶ್ವರಪ್ಪ ಪಾತ್ರವೂ ಇದೆ.
ಬಿಜೆಪಿ ಸರ್ಕಾರದ ಹುಳುಕು ಈಗ ಗೊತ್ತಾಗುತ್ತಿದೆ. ಬಿಎಸ್‌ವೈ ಆಡಳಿತ ಜಂಗಲ್ ರಾಜ್ ಆಡಳಿತವಾಗಿದೆ. ಹಾಗಾಗಿ, ಈಶ್ವರಪ್ಪ ಒಬ್ಬರಿಗೆ ಅನ್ಯಾಯವಾಗಿಲ್ಲ, ಹಲವು ಮಂತ್ರಿಗಳಿಗೆ ಬೇಜಾರಾಗಿದೆ ಎಂದರು.
ಇಲಾಖೆಗೆ ಬಜೆಟ್‌ನಲ್ಲಿ ನೀಡಿರುವ ಹಣವನ್ನು ತಮಗೆ ಬೇಕಾದವರಿಗೆ ನೀಡಲು ಅಧಿಕಾರ ಇಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಪರ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ಬ್ಯಾಟ್ ಬೀಸಿದರು.