ETV Bharat / state

ಸಿದ್ದರಾಮಯ್ಯರನ್ನು ನನ್ನ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಸುತ್ತೇನೆ: ಶಾಸಕ ಜಮೀರ್ ಅಹ್ಮದ್ - ಜಮೀರ್​ ಅಹ್ಮದ್​ ಖಾನ್​

ಸಿದ್ದರಾಮಯ್ಯ ಅವರಿಗೋಸ್ಕರ ಅಲ್ಲದಿದ್ದರೂ ರಾಜ್ಯದ ಜನರಿಗಾಗಿ ನನ್ನ ಕ್ಷೇತ್ರವನ್ನು ತ್ಯಾಗ ಮಾಡುತ್ತೇನೆ ಎಂದು ಶಾಸಕ ಜಮೀರ್​ ಅಹ್ಮದ್​ ತಿಳಿಸಿದ್ದಾರೆ.

MLA Jameer Ahmad
ಶಾಸಕ ಜಮೀರ್​ ಅಹ್ಮದ್​
author img

By

Published : Dec 17, 2022, 1:05 PM IST

ಶಾಸಕ ಜಮೀರ್​ ಅಹ್ಮದ್​ ಪ್ರತಿಕ್ರಿಯೆ

ಮಂಡ್ಯ: ನನ್ನ ಕ್ಷೇತ್ರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಒಪ್ಪಿಸಿ, ಚುನಾವಣೆಗೆ ನಿಲ್ಲಿಸಿ, ಅವರನ್ನು ಗೆಲ್ಲಿಸುತ್ತೇನೆ. ಅವರಿಗಾಗಿ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ತಾವು ಸಿದ್ಧ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಮಂಡ್ಯದ ಮುಸ್ಲಿಂ ಬಡಾವಣೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವುದೇ ಕ್ಷೇತ್ರ ಹುಡುಕುವುದು ಬೇಡ. ಅವರು ನನ್ನ ಕ್ಷೇತ್ರ ಚಾಮರಾಜಪೇಟೆಗೆ ಬರಲಿ. ನಾನು ಶ್ರಮ ಪಟ್ಟು ಅವರನ್ನು ಗೆಲ್ಲಿಸುತ್ತೇನೆ. ಈಗಾಗಲೇ ನಾನು ಅವರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ. ಅವರು ಒಪ್ಪಿಲ್ಲ, ಒಪ್ಪುತ್ತಾರೆ ಎನ್ನುವ ಭರವಸೆಯಿದೆ ಎಂದು ಹೇಳಿದರು.

ನನಗಿಂತ ರಾಜ್ಯದ ಜನರು ಸಿದ್ದರಾಮಯ್ಯ ಅವರನ್ನು ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೋಸ್ಕರ ಅಲ್ಲದಿದ್ದರೂ ರಾಜ್ಯದ ಜನರಿಗಾಗಿ ನನ್ನ ಕ್ಷೇತ್ರವನ್ನು ತ್ಯಾಗ ಮಾಡುತ್ತೇನೆ. ಸಿದ್ದರಾಮಯ್ಯ ಅವರು ರಾಜಕೀಯದಲ್ಲಿರಬೇಕು ಹಾಗಾಗಿ ಕ್ಷೇತ್ರ ಬಿಟ್ಟುಕೊಡುತ್ತೇನೆ. ನಾನು ನಾಲ್ಕನೇ ಬಾರಿ ಶಾಸನಾಗಿರುವುದು. ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ. ನನ್ನನ್ನು ಇಲ್ಲಿಂದ ತೆಗೆದುಹಾಕಲು ಬಹಳಷ್ಟು ಪ್ರಯತ್ನ ನಡೆದಿದೆ. ಆದರೆ ಅದು ಫಲ ನೀಡಿಲ್ಲ ಎಂದು ಎದುರಾಳಿಗಳಿಗೆ ಟಾಂಗ್​ ಕೊಟ್ಟರು.

ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್​ ಸರ್ಕಾರದ ಒಳ್ಳೆಯ ಕಾರ್ಯಕ್ರಮಗಳನ್ನು ನೆನಪಿಟ್ಟುಕೊಂಡಿರುವ ಜನ ಕಾಂಗ್ರೆಸ್​ನತ್ತ ಒಲವು ತೋರುತ್ತಿದ್ದಾರೆ. 2018ರಲ್ಲಿ ತಪ್ಪು ಮಾಡಿದ್ದೇವೆ ಎಂದು ಜನರೇ ಹೇಳುತ್ತಿದ್ದಾರೆ. ರಾಜ್ಯದ ಜನತೆಗೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕು. ಸಮಾವೇಶ ಮಾಡುವ ಬದಲು ನಾವು ಕೊಟ್ಟಿರುವ ಕಾರ್ಯಕ್ರಮ ಹೇಳಿ ಮತ ಕೇಳುತ್ತೇವೆ.

ಹಿಂದೂ-ಮುಸ್ಲಿಂ ನಡುವೆ ಗಲಾಟೆ ತಂದಿಟ್ಟು ಬಿಜೆಪಿಯವರು ಮತ ಕೇಳುತ್ತಾರೆ. ನಾವು ಬಿಜೆಪಿಯವರ ಥರ ನಡೆದುಕೊಳ್ಳಲ್ಲ. ಟಿಪ್ಪು ಜಯಂತಿ ಮಾಡೋದು ತಪ್ಪು ಅಂತಾರೆ, ಇನ್ನೊಂದು ಕಡೆ ಟಿಪ್ಪು ಜಯಂತಿಗೆ ಬಿಜೆಪಿಯವರೇ ಅನುಮತಿ ಕೊಡುತ್ತಾರೆ. ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಿದ್ದು ಬಿಜೆಪಿಯವರು. ಈ ಥರದ ವರ್ತನೆ ಜನರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಈ ಬಾರಿ ಖಂಡಿತ ಕಾಂಗ್ರೆಸ್​ ಅನ್ನು ಜನರು ಗೆಲ್ಲಿಸುತ್ತಾರೆ ಎಂದು ಆತ್ಮವಿಶ್ವಾಸದಿಂದ ಜಮೀರ್​ ಅಹಮದ್​ ಹೇಳಿದರು.

ಇದನ್ನೂ ಓದಿ: 'ರಾಜ್ಯದಲ್ಲಿ ರಾಜಕೀಯ ಬಾಂಬ್ ಬ್ಲಾಸ್ಟ್ ಆಗುತ್ತೆ, ಕಾದು ನೋಡಿ': ಜಮೀರ್​ ಅಹ್ಮದ್​ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.