ETV Bharat / state

ಶ್ರೀರಂಗಪಟ್ಟಣ ಚಲೋಗೆ ತಡೆ: ಬನ್ನಿಮಂಟಪದಲ್ಲಿ ಹಿಂದೂ ಕಾರ್ಯಕರ್ತರಿಂದ ಭಜನೆ - Srirangapatna Jamia Mosque issue

ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಶ್ರೀರಂಗಪಟ್ಟಣ ಚಲೋ ಜಾಥಾಗೆ ಪೊಲೀಸರು ತಡೆಯೊಡ್ಡಿದ್ದಾರೆ.

hindu-activists-bhajana-program-in-bannimantapa
ಶ್ರೀರಂಗಪಟ್ಟಣ ಚಲೋಗೆ ತಡೆ: ಬನ್ನಿಮಂಟಪದಲ್ಲಿ ಹಿಂದೂ ಕಾರ್ಯಕರ್ತರ ಭಜನೆ
author img

By

Published : Jun 4, 2022, 3:50 PM IST

Updated : Jun 4, 2022, 4:23 PM IST

ಮಂಡ್ಯ: ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಶ್ರೀರಂಗಪಟ್ಟಣ ಚಲೋ ಜಾಥಾಗೆ ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಬನ್ನಿಮಂಟಪದಲ್ಲಿ ಸಂಘಟನೆಗಳ ಕಾರ್ಯಕರ್ತರು ಭಜನೆ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ವಿವಾದ ಭುಗಿಲೆದ್ದಿದ್ದು, ಶನಿವಾರ ಬೆಳಗ್ಗೆಯೇ ನೂರಾರು ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಟ್ಟಣದಾದ್ಯಂತ ಜೂ.5ರ ಮುಂಜಾನೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಮೆರವಣಿಗೆ ಕೈಬಿಟ್ಟ ಸಂಘಟನೆಯವರು ಬನ್ನಿಮಂಟಪದ ಬಳಿ ಹನುಮಾನ್ ಚಾಲೀಸ ಪಠಣ ಮಾಡುತ್ತಿದ್ದಾರೆ. ಇಡೀ ಬನ್ನಿಮಂಟಪ ಕೇಸರಿಮಯವಾಗಿದ್ದು, ಜೈ ಶ್ರೀರಾಮ್ ಘೋಷಣೆ ಕೂಗಲಾಗುತ್ತಿದೆ.

ಹಿಂದೂ ಕಾರ್ಯಕರ್ತರಿಂದ ಭಜನೆ

ಹಿಂದೂ ಕಾರ್ಯಕರ್ತರು ಆಟೋ, ಬೈಕ್, ಕಾರುಗಳ ಮೂಲಕ ಏಕಕಾಲಕ್ಕೆ ನೂರಾರು ಸಂಖ್ಯೆಯಲ್ಲಿ ಬನ್ನಿಮಂಟಪದ ಬಳಿಗೆ ಕೇಸರಿ ಧ್ವಜ ಹಿಡಿದು ತೆರಳಿದ್ದಾರೆ. ಬನ್ನಿಮಂಟಪದಲ್ಲಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಪೂಜೆ ಮಾಡಿದ ಬಳಿಕ ಭಜನೆ ಆರಂಭಿಸಿದ್ದಾರೆ.

ಮದರಸಾ ವಿರುದ್ಧ ಆಕ್ರೋಶ

ಜಾಥಾ ವೇಳೆ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮದರಸಾವನ್ನು ನಿಲ್ಲಿಸಬೇಕು. ಆ ವಿದ್ಯಾರ್ಥಿಗಳನ್ನು ಅಲ್ಲಿಂದ ಕಳಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ: ಇಂದು ಶ್ರೀರಂಗಪಟ್ಟಣ ಚಲೋ; ಸೆಕ್ಷನ್​ 144 ಜಾರಿ

Last Updated : Jun 4, 2022, 4:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.