ಮಂಡ್ಯ : ಜಿಲ್ಲೆಯ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬೋರಯ್ಯ ವಿದ್ಯಾರ್ಥಿನಿಯರ ಜೊತೆ ಅಶ್ಲೀಲ ಮಾತುಗಳನ್ನಾಡುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಶಿಕ್ಷಕನ ಅಸಭ್ಯವಾಗಿ ವರ್ತನೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಗ್ರಾಪಂ ಪಿಡಿಒ ಬಳಿ ಅಳಲು ತೋಡಿಕೊಂಡಿದ್ದಾರೆ. ಈತ ಪಾಠ ಮಾಡುವ ಬದಲು ಬರೀ ವೈಯಕ್ತಿಕ ವಿಷಯ ಮಾತನಾಡುತ್ತಾರೆ. ಕ್ಲಾಸ್‌ನಲ್ಲಿ ಲವ್, ಅಫೇರ್ ಅಂತೆಲ್ಲಾ ಅಶ್ಲೀಲವಾಗಿ ಮಾತನಾಡುತ್ತಾರೆಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಪಿಡಿಒ ಸಿದ್ದರಾಜು ಬಿಇಒಗೆ ವಿಸ್ತೃತ ವರದಿ ನೀಡಿದ್ದಾರೆ. ಶಿಕ್ಷಕ ಬೋರಯ್ಯನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ತಕ್ಷಣ ಕ್ರಮ ತೆಗೆಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ.