ಮಂಡ್ಯ: 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ. ನಮ್ಮ ಪಕ್ಷವನ್ನು ಅಷ್ಟು ಸುಲಭವಾಗಿ ನಾಡಿನಿಂದ ಮರೆ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮದ್ದೂರಿನಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು ಹಾಗೂ ಬಡ ಜನರಿಗೆ 7 ಸಾವಿರ ಉಚಿತ ಕಿಟ್ ವಿತರಿಸಿ ಮಾತನಾಡಿದರು.
ಪ್ರಮಾಣಿಕವಾಗಿ ಪಕ್ಷ ಹೋರಾಟ ಮಾಡ್ತಿರುವುದು ಅಧಿಕಾರಕ್ಕಲ್ಲ, ನಾಡಿನ ಸಮಸ್ಯೆಗಳ ಬಗೆರಿಸುವುದಕ್ಕೆ, ನಿಮಗೆ ಗೌರವಯುತ ಬದುಕು ತರುವುದಕ್ಕೆ ಎಂದು ಹೇಳಿದರು.
ಕೋವಿಡ್ ಇರುವುದರಿಂದ ನಮ್ಮ ರಾಜಕೀಯ ಹೋರಾಟಕ್ಕೆ ತಡೆಯೊಡ್ಡಿದ್ದೇವೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು ಎಂದು ಮೌನವಿದ್ದೇವೆ ಎಂದರಲ್ಲದೇ ರಾಜ್ಯದ ಒಂದು ಕೋಟಿ ಕುಟುಂಬಕ್ಕೆ ತಲ 10 ಸಾವಿರ ರೂ. ಕೊಡಿ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇವೆ ಎಂದರು.
ಜನರಿಗೆ 10 ಸಾವಿರ ಕೋಟಿ ರೂ. ಕೊಟ್ಟರೆ ಸರ್ಕಾರದ ಮೇಲೆ ಹೊರೆ ಬೀಳುತ್ತೆ ಅಷ್ಟೇ. ಆದರೆ ಸರ್ಕಾರ ಆರ್ಥಿಕ ಸಂಕಷ್ಟ ಅಂತಾ ಹೇಳ್ತಾರೆ. ಕಳೆದ ವರ್ಷ ಮದ್ಯ ಮಾರಾಟದಿಂದ 1,700 ಕೋಟಿ ರೂ. ಆದಾಯ ಬಂದಿತ್ತು. ಇದಲ್ಲದೇ ಎರಡನೇ ಅಲೆಯಲ್ಲಿ ಎರಡೂ ತಿಂಗಳಲ್ಲಿ ಮೂರುವರೆ ಸಾವಿರ ಕೋಟಿ ರೂ. ಆದಾಯ ಬಂದಿದೆ. ಇಲ್ಲಿ ದುಡ್ಡು ಕೊಟ್ಟಿದ್ದು ನೀವು, ನಿಮಗೆ ಈ ಸರ್ಕಾರ ವಾಪಸ್ ಕೊಡ್ತಿಲ್ಲ. ನಿಮ್ಮನ್ನ ಈ ಸರ್ಕಾರ ಕಡೆಗಣಿಸುತ್ತಿದೆ, ಈಗ ಟೀಕೆ ಮಾಡಲು ಹೊಗಲ್ಲ ಎಂದು ಸರ್ಕಾರದ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.