ETV Bharat / state

ಗ್ರಾಮ ಪಂಚಾಯತ್‌ ಚುನಾವಣೆ : 6 ಹಳ್ಳಿಗಳ 12 ಸದಸ್ಯರ ಸ್ಥಾನಕ್ಕೆ ಅವಿರೋಧ ಆಯ್ಕೆ - Mandya Gram panchayath members

ಕರಿದೊಡ್ಡಿ, ಮಾರದೇವನಹಳ್ಳಿ, ಹೊಸಹಳ್ಳಿದೊಡ್ಡಿ, ವಡ್ಡರದೊಡ್ಡಿ ಗ್ರಾಮಗಳಲ್ಲಿ ಸದಸ್ಯರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ರದ್ದಾಗಿದೆ. ಯಾವುದೇ ಗೊಂದಲವಿಲ್ಲದೆ ಆಯ್ಕೆ ಪ್ರಕ್ರಿಯೆ ನಡೆದಿರುವುದು ಉತ್ತಮ ಬೆಳವಣಿಗೆ..

gram-panchayath-elections-unanimous-selection-of-12-members-of-6-villages
ಗ್ರಾಮ ಪಂಚಾಯ್ತಿ ಚುನಾವಣೆ: 6 ಹಳ್ಳಿಗಳ 12 ಸದಸ್ಯರ ಸ್ಥಾನಕ್ಕೂ ಅವಿರೋಧ ಆಯ್ಕೆ
author img

By

Published : Dec 19, 2020, 12:58 PM IST

ಮಂಡ್ಯ : ಸಕ್ಕರೆ ನಾಡಿನಲ್ಲಿ ಗ್ರಾಮ ಪಂಚಾಯತ್​ ಚುನಾವಣಾ ಅಖಾಡ ಸಿದ್ಧವಾಗಿದೆ. ಸದಸ್ಯರ ಆಯ್ಕೆಗೆ ಲಕ್ಷ ಲಕ್ಷ ಹರಾಜು ಪ್ರಕ್ರಿಯೆ ನಡೆದಿದ್ದು ಬಾರಿ ಸದ್ದು ಮಾಡಿತ್ತು. ಹರಾಜು ಆರೋಪದ ನಡುವೆಯೂ ಇದೀಗ ಜಿಲ್ಲೆಯಲ್ಲಿ ಹಲವಾರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್‌ ಚುನಾವಣೆ.. 6 ಹಳ್ಳಿಗಳ 12 ಸದಸ್ಯರ ಸ್ಥಾನಕ್ಕೂ ಅವಿರೋಧ ಆಯ್ಕೆ

ಮಂಡ್ಯ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಯ ಸದಸ್ಯರ ಸ್ಥಾನಕ್ಕೆ ಬಾರಿ ಪೈಪೋಟಿ ನಡೆಯುತ್ತಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಕದಲೂರು ಗ್ರಾಪಂ ವ್ಯಾಪ್ತಿಯ 6 ಹಳ್ಳಿಗಳ 12 ಸದಸ್ಯರ ಸ್ಥಾನಕ್ಕೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಊರಿನ ಜನರ ಬೆಂಬಲ ಕೂಡ ವ್ಯಕ್ತವಾಗ್ತಿದ್ದು, ಗ್ರಾಮದ ಅಭಿವೃದ್ಧಿಗಾಗಿ ಈ ರೀತಿಯ ಆಯ್ಕೆ ಪ್ರಕ್ರಿಯೆ ನಡೆದಿದೆ ಎನ್ನಲಾಗುತ್ತಿದೆ.

ಇನ್ನು ಕರಿದೊಡ್ಡಿ, ಮಾರದೇವನಹಳ್ಳಿ, ಹೊಸಹಳ್ಳಿದೊಡ್ಡಿ, ವಡ್ಡರದೊಡ್ಡಿ ಗ್ರಾಮಗಳಲ್ಲಿ ಸದಸ್ಯರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ರದ್ದಾಗಿದೆ. ಯಾವುದೇ ಗೊಂದಲವಿಲ್ಲದೆ ಆಯ್ಕೆ ಪ್ರಕ್ರಿಯೆ ನಡೆದಿರುವುದು ಉತ್ತಮ ಬೆಳವಣಿಗೆ ಎಂದು ಮದ್ದೂರು ತಹಶೀಲ್ದಾರ್ ವಿಜಯ್​ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.