ETV Bharat / state

"ನಾರಿ ಶಕ್ತಿ"ಯ ಗುಣಗಾನದ ಹಾಡು ಬರೆದ ಸರ್ಕಾರಿ ಅಧಿಕಾರಿ..! - ಮಂಡ್ಯ

ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿರುವ ಸೋಮಶೇಖರ್ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ "ನಾರಿ ಶಕ್ತಿ" ಗೀತೆ ರಚಿಸಿದ್ದಾರೆ.

Somashekar
ಸೋಮಶೇಖರ್
author img

By

Published : Mar 12, 2021, 2:04 PM IST

ಮಂಡ್ಯ: ಈಗೀಗ ಸರ್ಕಾರಿ ಅಧಿಕಾರಿಗಳು ಅಂದ್ರೆ, ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಗಿದೆ. ಇನ್ನ ಕೆಲವರು ತಾವಾಯ್ತು, ತಮ್ಮ ಕೆಲಸ ಆಯ್ತು ಅನ್ನೋರು ಇದ್ದಾರೆ. ಆದರೆ, ಇಲ್ಲೊಬ್ಬರು ಅಧಿಕಾರಿ ಅದೆಲ್ಲದಕ್ಕೂ ತದ್ವಿರುದ್ದವಾಗಿದ್ದು, ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿರುವ ಸೋಮಶೇಖರ್ ವೃತ್ತಿಯಲ್ಲಿ ಸರ್ಕಾರಿ ಅಧಿಕಾರಿ ಆದರೂ, ಪ್ರವೃತ್ತಿಯಲ್ಲಿ ಉತ್ತಮ ಸಾಹಿತ್ಯಾಸಕ್ತರು, ಬರಹಗಾರರು ಆಗಿದ್ದಾರೆ. ಸರ್ಕಾರಿ ನೌಕರಿ ಜೊತೆಗೆ ಸಾಹಿತ್ಯ ಕೃಷಿ ಮೈಗೂಡಿಸಿಕೊಂಡಿರುವ ಸೋಮಶೇಖರ್ ರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಸ್ತ್ರೀ ಕುಲಕ್ಕೆ ಅಂತಾನೇ ವಿಶೇಷ ಗೀತೆ ರಚನೆ ಮಾಡಿದ್ದಾರೆ.

"ನಾರಿ ಶಕ್ತಿ"ಯ ಗುಣಗಾನದ ಹಾಡು ಬರೆದ ಸರ್ಕಾರಿ ಅಧಿಕಾರಿ

ನಾರಿ ಶಕ್ತಿ ಎಂಬ ಶೀರ್ಷಿಕೆಯಡಿ ರಚಿಸಿರುವ ಗೀತೆಯಲ್ಲಿ ಜೀವ ಕೊಡೋದ್ರಿಂದ ಮುಕ್ತಿ ಕರುಣಿಸೋವರೆಗೂ ಹೆಣ್ಣು ಹೇಗೆಲ್ಲ ನಮಗೆ ಶಕ್ತಿಯಾಗಿರ್ತಾಳೆ, ಆಸರೆಯಾಗಿರ್ತಾಳೆ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸ್ವತಃ ಸೋಮಶೇಖರ್ ಅವರೇ ರಚಿಸಿರುವ ಸಾಹಿತ್ಯಕ್ಕೆ, ಮೈಸೂರಿನ ಸಂಗೀತ ನಿರ್ದೇಶಕ ನೀತು ನಿನಾದ್ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಗಾಯಕ ನಿತಿನ್ ರಾಜಾರಾಂ ಶಾಸ್ತ್ರಿ ಹಾಗೂ ಯುವ ಪ್ರತಿಭೆ ರಶ್ಮಿ ಧರ್ಮೇಂದ್ರ ಧ್ವನಿಯಲ್ಲಿ ಹಾಡು ಮತ್ತಷ್ಟು ಇಂಪಾಗಿಸಿದೆ.

ಇನ್ನು ಸೋಮಶೇಖರ್ ಅವರು ತಮ್ಮ ಗೀತೆಯನ್ನ ಮಹಿಳಾ ದಿನದ ನಿಮಿತ್ತ ಸ್ತ್ರೀ ಕುಲಕ್ಕೆ ಸಮರ್ಪಿಸಿದ್ರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಡ್ಯ ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ ಸಾಂಗ್ ರಿಲೀಸ್ ಮಾಡಿದ್ರು.

ಸೋಮಶೇಖರ್ ಅವರ ಸಾಹಿತ್ಯಕ್ಕೆ ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು, ಖ್ಯಾತ ಕೊರಳು ವಾದಕ ಪ್ರವೀಣ್ ಗೋಡ್ಖಿಂಡಿ, ಸಂಗೀತ ನಿರ್ದೇಶಕ ರಘು ದೀಕ್ಷಿತ್, ಗಾಯಕಿ ಅನನ್ಯ ಭಟ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದ್ದು, ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 40 ಸಾವಿರ ಮಂದಿ ವೀಕ್ಷಣೆ, ಸಾವಿರಾರು ಜನರ ಲೈಕ್, ಪಾಸಿಟಿವ್ ಕಾಮೆಂಟ್​ಗಳು ವ್ಯಕ್ತವಾಗಿವೆ.

ಒಟ್ಟಾರೆ ಸರ್ಕಾರಿ ಅಧಿಕಾರಿ ಎಂಬ ಅಹಂ ಬಿಟ್ಟು, ಮಹಿಳೆಯರ ಮೇಲಿನ ಸಾಮಾಜಿಕ ಜವಾಬ್ದಾರಿ ಪ್ರದರ್ಶನ ಮಾಡಿರೋ ಸೋಮಶೇಖರ್ ಕಾರ್ಯ ಶ್ಲಾಘನೀಯ. ಅವರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ಮತ್ತಷ್ಟು ಯಶಸ್ಸು ಸಿಗಲಿ ಅಂತಾ ಹಾರೈಸೋಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.