ETV Bharat / state

ಮಂಡ್ಯದ ಸ್ವಾಭಿಮಾನ ಮಾರಾಟಕ್ಕಿಲ್ಲ ಅಂತ ತೋರಿಸಿ, ಸುಮಾ ಬೆಂಬಲಿಸಿ - ಯಶ್

ಮಂಡ್ಯ ಜಿಲ್ಲೆ ಕೆ.ಆರ್​ ಪೇಟೆ ಕ್ಷೇತ್ರದಲ್ಲಿ ನಟ ಯಶ್,​ ಸುಮಲತಾ ಅಂಬರೀಶ್ ಪರ ಪ್ರಚಾರ ಮುಂದುವರೆಸಿದರು.

ಸುಮಲತಾ ಬೆದರಿಕೆಗೆ ಬಗ್ಗದೆ ಕೆಲಸ ಮಾಡುತ್ತಾರೆ
author img

By

Published : Apr 14, 2019, 2:59 PM IST

ಮಂಡ್ಯ: ಯಾರ ಬೆದರಿಕೆಗೂ ಬಗ್ಗದೆ ಸುಮಲತಾ ಅಂಬರೀಶ್ ಕೆಲಸ ಮಾಡುತ್ತಾರೆ. ಅವರಿಗೊಂದು ಅವಕಾಶ ಕೊಡಿ ಎಂದು ರಾಕಿಂಗ್​ ಸ್ಟಾರ್​ ಯಶ್​ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಆನೆಗೋಳದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡುತ್ತಿರುವ ಅವರು, ಚುನಾವಣಾ ಭ್ರಷ್ಟಾಚಾರದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ನಟ ಯಶ್​

ಮತದಾರರಿಗೆ ಕಿವಿ ಮಾತು ಹೇಳಿರುವ ಯಶ್‌,​ ಚುನಾವಣೆಯ ಕಡೆಯ 2 ದಿನ ಹುಷಾರಾಗಿರಿ ಎಂದಿದ್ದಾರೆ. ಇನ್ನೂ ಸಂಸದ ಶಿವರಾಮೇಗೌಡರ ಮಗನ ಆಡಿಯೋ ಕೇಳಿದಿರಿ ಅಲ್ವಾ ಎಂದು ಅವರು ಪ್ರಶ್ನಿಸಿದಾಗ, ನಾವು 150 ಕೋಟಿ ಕೇಳಿದ್ದೀವಿ ಎಂದು ಗ್ರಾಮಸ್ಥರು ಉತ್ತರಿಸಿದ್ದಾರೆ.

ಇದಕ್ಕೂ ಮುನ್ನ ಅಭಿಮಾನಿಗಳು ಯಶ್‌ಗೆ ಕ್ರೇನ್ ಮೂಲಕ ಹಾರ ಹಾಕಿ ಗ್ರಾಮಕ್ಕೆ ಸ್ವಾಗತಿಸಿದರು.

ಪ್ರಚಾರದ ವೇಳೆ ಆಪೆ ಆಟೋದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಅಸ್ವಸ್ಥನಿಗೆ ದಾರಿ ಮಾಡಿಕೊಟ್ಟು ರಾಕಿಂಗ್ ಸ್ಟಾರ್ ಮಾನವೀಯತೆ ಮೆರೆದರು.

Intro:ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡುತ್ತಿರುವ ನಟ ಯಶ್, ಚುನಾವಣಾ ಭ್ರಷ್ಟಾಚಾರದ ಬಗ್ಗೆ ಮತದಾರರಿಗೆ ಪಾಠ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಯಶ್, ಚುನಾವಣೆಯ ಹಿಂದಿನ ಎರಡು ದಿನಗಳ ಬಗ್ಗೆ ಜಾಗೃತಿ ಸುವಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಕಡೆಯ ಎರಡು ದಿನ ಹುಷಾರಾಗಿರಿ. ನಾವಲ್ಲ ಜನಗಳು ಕೂಡ ಹುಷಾರಾಗಿರಬೇಕು ಎಂದು ಅಭಿಮಾನಿಗಳಿಗೆ ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ ನೀಡಿದರು.
ಯಾರ ಬೆದರಿಕೆಗೂ ಬಗ್ಗದೆ ಸುಮಲತಾ ಅಂಬರೀಶ್ ಕೆಲಸ ಮಾಡುತ್ತಾರೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಆಡಿಯೋ ಲೀಕ್ ಬಗ್ಗೆ ಗ್ರಾಮಸ್ಥರಿಗೆ ಆಡಿಯೋ‌ ಕೇಳಿದಿರ ಅಲ್ವಾ ಎಂದ ಯಶ್‌ಗೆ 150 ಕೋಟಿ ಕೇಳಿದ್ದಿವಿ ಎಂದು ಗ್ರಾಮಸ್ಥರು ಉತ್ತರಿಸಿದರು.
ಆನೆಗೋಳದಲ್ಲಿ ಯಶ್‌ಗೆ ಕ್ರೇನ್ ಮೂಲಕ ಹಾರ ಹಾಕಿ ಗ್ರಾಮಕ್ಕೆ ಸ್ವಾಗತ ಮಾಡಿದರು.
ಪ್ರಚಾರದ ವೇಳೆ ಮಾನವಿಯತೆ:
ಅಪ್ಪೆ ಆಟೋದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಅಸ್ವಸ್ಥನಿಗೆ ಪ್ರಚಾರ ನಿಲ್ಲಿಸಿ ದಾರಿ ಮಾಡಿಕೊಟ್ಟ ರಾಕಿಂಗ್ ಸ್ಟಾರ್ ಮಾನವೀಯತೆ ಕಂಡು ಅಭಿಮಾನಿಗಳು ಸಂತಸಪಟ್ಟರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.