ಮಂಡ್ಯ: ನಾಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನ ಕಾಪಾಡಲು ಹೋದ ಮೂವರು ನೀರುಪಾಲಾಗಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಮಂದಗೆರೆ ಎಡದಂಡ ನಾಲೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಇಂದು ಬೆಳಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಮೂವರ ಮೃತದೇಹ ಹೊರತೆಗೆದಿದ್ದಾರೆ.
ಮೈಸೂರು ಮೂಲದ ಮಂಜು, ರಾಜು ಹಾಗೂ ಚಂದ್ರು ಎಂಬುವರ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನ ದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.
ಘಟನೆ ನಡೆದಿದ್ದೇಗೆ..?
ಕೆಆರ್ ಪೇಟೆಯ ಚಂದಗೋಳಮ್ಮ ದೇವಾಲಯಕ್ಕೆ ಮೈಸೂರು ಮೂಲದ 8 ಜನ ಸ್ನೇಹಿತರು ಬಂದಿದ್ದು, ಹರಕೆ ಪೂಜೆ ಸಲ್ಲಿಸಿ ನಿನ್ನೆ ಸಂಜೆ ಈಜಲು ನಾಲೆಗಿಳಿದಿದ್ದರು ಎನ್ನಲಾಗ್ತಿದೆ. ಈ ವೇಳೆ ರಾಜು ಎಂಬುವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಕಾಪಾಡಲು ಸ್ನೇಹಿತ ಮಂಜು ಮುಂದಾಗಿದ್ದಾನೆ. ಬಳಿಕ ಇಬ್ಬರು ದಡ ಸೇರದ ಹಿನ್ನೆಲೆ ಇನ್ನಿಬ್ಬರು ನೀರಿಗಿಳಿದಿದ್ದಾರೆ. ಆದರೆ ನಾಲ್ವರು ಮೇಲೆ ಬರಲಾಗದೆ ನೀರು ಪಾಲಾಗಿದ್ದಾರೆ.
ಇತ್ತ ಸ್ನೇಹಿತರು ನೀರು ಪಾಲಾದ ಭಯದಲ್ಲಿ ಉಳಿದಿಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕೆ.ಆರ್. ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಜಲ ಸಂಪನ್ಮೂಲ ಇಲಾಖೆಯಿಂದಲೇ ರೂಲ್ಸ್ ಬ್ರೇಕ್ : ಕೆಆರ್ಎಸ್ ಹಿನ್ನೀರಿನಲ್ಲಿ ಸೈಲಿಂಗ್ ಸ್ಪರ್ಧೆ