ಮಂಡ್ಯ: ಅನಾರೋಗ್ಯದ ಕಾರಣ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬೆಂಗಳೂರಿನ ಖಾಸಗಿ ಅಸ್ಪತ್ರೆ ಟ್ರಸ್ಟ್ ವೆಲ್ಗೆದಾಖಲಾಗಿದ್ದಾರೆ.
ಇವರು ಕಳೆದ ವಾರವಷ್ಟೇ ಪದ್ಮನಾಭನಗರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾಗಿದ್ದ ತಮ್ಮ ಮಗ ಚೇತನ್‌ಗೌಡನನ್ನು ಜೆಡಿಎಸ್‌ಗೆ ಕರೆತಂದಿದ್ದರು. ಸ್ವಪಕ್ಷದಲ್ಲೇ ಹಾಗೂ ಸ್ವಕ್ಷೇತ್ರದಲ್ಲೇ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು. ಅಲ್ಲದೇ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಾನೇ ಜೆಡಿಎಸ್ ಅಭ್ಯರ್ಥಿ ಆಗಲಿದ್ದೇನೆ ಎಂದು ಹೇಳಿಕೊಂಡಿದ್ದ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೂ ಮುಂದಾಗಿದ್ದರು.ಆದ್ರೆ, ಈ ಹೊತ್ತಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ.
ಸದ್ಯ ಶಾಸಕ ಸುರೇಶ್‌ಗೌಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ತಮ್ಮ ಮಗ ಚೇತನ್‌ಗೌಡ ಕೂಡ ಇದ್ದರು.