ಮಂಡ್ಯ: ಮಾಜಿ ಸಚಿವ, ರೆಬೆಲ್ ನಾಯಕ ಎನ್ ಚೆಲುವರಾಯಸ್ವಾಮಿ ಆಟೋ ಚಾಲನೆ ಮೂಲಕ ತಮ್ಮ ಅಭಿಮಾನಿಯ ಹೊಸ ಉದ್ಯೋಗಕ್ಕೆ ಶುಭ ಕೋರಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದ ನಾಗಮಂಗಲ ತಾಲೂಕಿನ ಚಂದನಹಳ್ಳಿಯ ಅಂಜನ್ ಗೌಡ ಆಟೋ ಖರೀದಿ ಮಾಡಿದ್ದರು. ತಾವು ಚಾಲನೆ ಮಾಡುವುದಕ್ಕೂ ಮೊದಲು ತಮ್ಮ ನೆಚ್ಚಿನ ನಾಯಕ ಚೆಲುವರಾಯಸ್ವಾಮಿ ಅವರಿಂದ ಚಾಲನೆ ನೀಡಬೇಕು ಎಂಬ ಇರಾದೆ ಹೊಂದಿದ್ದರು.

ಹೀಗಾಗಿ ಚೆಲುವರಾಯಸ್ವಾಮಿ ಆಟೋ ಚಾಲನೆ ಮಾಡುವ ಮೂಲಕ ಶುಭ ಕೋರಿದ್ದಾರೆ. ತಮ್ಮ ಅನುಭವವನ್ನು ಇನ್ಸ್ಟಾಗ್ರಾಮ್ಖಾತೆಯಲ್ಲಿ ಹಂಚಿಕೊಂಡಿದ್ದಾರೆ.