ETV Bharat / state

ಹೆಚ್​​ಡಿಕೆ ಏಕೆ ಮಂಡ್ಯಕ್ಕೆ ಏನೂ ಮಾಡಿಲ್ಲ.. ಮಂಡ್ಯದಲ್ಲಿ ಅವರನ್ನು ಬಿಟ್ಟರೆ ಬೇರೆಯವರು ಬೆಳೆಯಬಾರದಾ..?

ನಾವು ರಾಜಕೀಯವಾಗಿ ಬೆಳೆಯಲೇಬಾರದು ಎಂಬುದು ನಿಮ್ಮ ಉದ್ದೇಶವೇ? ನಮಗಿರುವುದು ಒಂದೇ ಕರ್ಮಭೂಮಿ. ಅದು ಮಂಡ್ಯ ಜಿಲ್ಲೆ. ನಿಮಗಾದರೆ ಇಡೀ ದೇಶವೇ ಇದೆ. ಹೋದ ಕಡೆಯಲ್ಲೆಲ್ಲಾ ನನ್ನ ಕರ್ಮಭೂಮಿ ಅಂತೀರಾ, ನನ್ನ ಜಿಲ್ಲೆ ಅಂತೀರಾ. ನಮಗೆ ಅಂತಹ ಪರಿಸ್ಥಿತಿ ಇಲ್ಲ..

Former minister chaluvarayaswamy
ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ
author img

By

Published : Jul 2, 2021, 12:04 PM IST

ಮಂಡ್ಯ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾದ ರಾಜಕಾರಣ ಮಾಡಲಿ. ತೇಜೋವಧೆ ರಾಜಕಾರಣ ಮಾಡುವುದು ಬೇಡ ಎಂದು ಮಾಜಿ ಸಚಿವ ಎನ್‌ ಚಲುವರಾಯಸ್ವಾಮಿ ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾವು ರಾಜಕಾರಣ ಮಾಡುವುದರಿಂದ ನಿಮಗಾಗಿರುವ ತೊಂದರೆ ಏನು?. ನಾವು ರಾಜಕೀಯವಾಗಿ ಬೆಳೆಯಲೇಬಾರದು ಎಂಬುದು ನಿಮ್ಮ ಉದ್ದೇಶವೇ? ನಮಗಿರುವುದು ಒಂದೇ ಕರ್ಮಭೂಮಿ. ಅದು ಮಂಡ್ಯ ಜಿಲ್ಲೆ. ನಿಮಗಾದರೆ ಇಡೀ ದೇಶವೇ ಇದೆ. ಹೋದ ಕಡೆಯಲ್ಲೆಲ್ಲಾ ನನ್ನ ಕರ್ಮಭೂಮಿ ಅಂತೀರಾ, ನನ್ನ ಜಿಲ್ಲೆ ಅಂತೀರಾ. ನಮಗೆ ಅಂತಹ ಪರಿಸ್ಥಿತಿ ಇಲ್ಲ ಎಂದರು.

ಲಘುವಾಗಿ ಎಲ್ಲೂ ಮಾತನಾಡಿಲ್ಲ : ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ವೈಯಕ್ತಿಕ ಸಾಧನೆಯೊಂದಿಗೆ ಎತ್ತರಕ್ಕೆ ಬೆಳೆದಿದ್ದಾರೆ. ಅವರಿಗೆ ನನ್ನ ಮಾತನ್ನು ಜನರೆದುರು ತಿರುಚಿ ಹೇಳಿ, ಅನುಕಂಪ ಗಿಟ್ಟಿಸುವ ಅಗತ್ಯವಿಲ್ಲ. ಹೆಚ್ ಡಿ ಕುಮಾರಸ್ವಾಮಿ ಅವರಿಗಿಂತಲೂ ದೇವೇಗೌಡರಿಗೆ ನಾನು ಹೆಚ್ಚು ಗೌರವ ಕೊಟ್ಟಿದ್ದೇನೆ.

ಅವರನ್ನು ತಂದೆಯ ಸ್ಥಾನದಲ್ಲಿರಿಸಿದ್ದೇನೆ. ನನ್ನ ಮನೆಯ ಗೃಹ ಪ್ರವೇಶಕ್ಕೆ ದೇವೇಗೌಡರು-ಚೆನ್ನಮ್ಮ ಅವರಿಂದಲೇ ಪೂಜೆ ಮಾಡಿಸಿದ್ದೆ. ಕುಮಾರಸ್ವಾಮಿ ಅವರ ಮನೆಯ ಗೃಹ ಪ್ರವೇಶಕ್ಕೆ ದೇವೇಗೌಡರನ್ನ ಕೂರಿಸಿ ಪೂಜೆ ಮಾಡಿಸಿದ್ದರೋ ಇಲ್ಲವೋ ಗೊತ್ತಿಲ್ಲ. ನಾವಂತೂ ಗೌಡರ ಕುಟುಂಬದ ಬಗ್ಗೆ, ನನ್ನ ರಾಜಕೀಯ ಜೀವನದಲ್ಲೆಲ್ಲೂ ಹಗುರವಾಗಿ ಮಾತನಾಡಿಲ್ಲ ಎಂದರು.

ಮಾಜಿ ಸಿಎಂ ಹೆಚ್​​ಡಿಕೆ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ಅಭಿವೃದ್ಧಿ ವಿಚಾರದಲ್ಲಿ ಮಂಡ್ಯ ಬಗ್ಗೆ ಪ್ರೀತಿ ಏಕಿಲ್ಲ?: ಹಾಸನ ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ತೋರಿಸುವ ಜೆಡಿಎಸ್ ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಏಕೆ ಅದೇ ಮಮಕಾರವನ್ನು ತೋರುವುದಿಲ್ಲ. ಹಾಸನ ವಿಮಾನ ನಿಲ್ದಾಣಕ್ಕೆ ಕಡಿಮೆ ಬಿಡುಗಡೆ ಮಾಡಿದರೆಂಬ ಕಾರಣಕ್ಕೆ ದೇವೇಗೌಡರು ಪ್ರತಿಭಟನೆಗೆ ಮುಂದಾಗಿದ್ದರು.

ಆಗ ಸಿಎಂ ಹೆದರಿ ನಿಗದಿಪಡಿಸಿದಷ್ಟು ಹಣ ಬಿಡುಗಡೆ ಮಾಡಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಯಾಕಿಲ್ಲ ಎಂದು ಪ್ರಶ್ನಿಸಿದರು.

8,500 ಕೋಟಿ ರೂ.ಬಿಡುಗಡೆ ಮಾಡಿಸಿ : ನಿಮ್ಮ ಜೊತೆ ಸಿಎಂ ಯಡಿಯೂರಪ್ಪ ರಾಜಕೀಯವಾಗಿ ಚೆನ್ನಾಗಿದ್ದಾರೆ. ಮಂಡ್ಯ ಅಭಿವೃದ್ಧಿ ಬಗ್ಗೆ ನಿಮಗೆ ಕಾಳಜಿ ಇದ್ದರೆ ನೀವು ಸಿಎಂ ಆಗಿದ್ದ ಅವಧಿಯಲ್ಲಿ ಘೋಷಿಸಿದ್ದ 8500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿ. ಸರ್ಕಾರದೊಂದಿಗೆ ಮಾತನಾಡಿ, ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲು ಹಣ ದೊರಕಿಸಿಕೊಟ್ಟು ಜಿಲ್ಲೆಯ ಜನರ ಋಣ ತೀರಿಸಿ. ಅದನ್ನು ನಾವೂ ಸ್ವಾಗತಿಸುತ್ತೇವೆ. ಸುಮ್ಮನೆ ಅಭಿವೃದ್ಧಿ ವಿಚಾರದಲ್ಲಿ ಬೊಗಳೆ ಬಿಡುವುದು ಬೇಡ ಎಂದು ಕುಟುಕಿದರು.

ನಾವು ಸಿಎಂ ಭೇಟಿ ಮಾಡುವುದಕ್ಕೆ ಸಮಯ ನಿಗದಿ ಪಡಿಸುವಷ್ಟು ಶಕ್ತರಿರುವ ನೀವು, ಜಿಲ್ಲೆಯ ಹಣವನ್ನು ಬಿಜೆಪಿಯವರು ಬೇರೆ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗುವಾಗ ಏನು ಮಾಡುತ್ತಿದ್ದಿರಿ?, ಜಿಲ್ಲೆಯಲ್ಲಿರುವ ನಿಮ್ಮ ಶಾಸಕರು ಏನು ಮಾಡುತ್ತಿದ್ದರು. ಅವರಾದರೂ ನಿಮ್ಮ ಗಮನಕ್ಕೆ ತಂದು ಅನುದಾನ ತಡೆಹಿಡಿಯಬಹುದಿತ್ತಲ್ಲವೇ?. ನಮಗೆ ಅಧಿಕಾರವಿಲ್ಲ, ವಿಧಾನಸಭೆಯಲ್ಲಿ ಮಾತನಾಡುವುದಕ್ಕೆ ಆಗುತ್ತಿಲ್ಲ. ಸಿಎಂ ಜೊತೆ ಒಳ್ಳೆಯ ಸಂಬಂಧವಿರುವ ನೀವು ಅನುದಾನ ವಾಪಸ್ ಕೊಡಿಸಿ ಅಭಿವೃದ್ಧಿಗೆ ಚಾಲನೆ ಕೊಡಿ ಎಂದರು.

ಒಮ್ಮೆಯೂ ಸಿಎಂ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿಲ್ಲ : ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣವಾಗಿ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಹಾಸನ ವಿಚಾರದಲ್ಲಿ ತೋರಿಸುವ ಪ್ರೀತಿಯಲ್ಲಿ ಕಾಲುಭಾಗದಷ್ಟನ್ನೂ ಮಂಡ್ಯ ಮೇಲೆ ತೋರಿಸುತ್ತಿಲ್ಲ ಎಂದು ಚಲುವರಾಯಸ್ವಾಮಿ ದೂರಿದರು.

ತನಿಖೆಗೆ ತಡೆಯಾಜ್ಞೆ ಕೊಡಿಸಿಲ್ಲ : ಮನ್‌ಮುಲ್‌ನಲ್ಲಿ ಮೆಗಾಡೇರಿ ವಿಷಯದಲ್ಲಿ ನಡೆದಿದೆ ಎನ್ನಲಾದ 12 ಸಾವಿರ ಕೋಟಿ ರೂ. ಹಗರಣದ ತನಿಖೆಗೆ ನಾನು ತಡೆಯಾಜ್ಞೆ ಕೊಡಿಸಿಲ್ಲ. ಆಡಳಿತ ಮಂಡಳಿ ಮುಕ್ತಾಯ ಹಂತದಲ್ಲಿದ್ದ ಸಮಯದಲ್ಲಿ ಕುಮಾರಸ್ವಾಮಿ ಸರ್ಕಾರ ಸೂಪರ್‌ ಸೀಡ್‌ ಮಾಡಿ ಆದೇಶ ಹೊರಡಿಸಿತ್ತು. ಚುನಾವಣೆ ಸಮೀಪದಲ್ಲೇ ಇದ್ದುದರಿಂದ ಅವರು ಮತ್ತೆ ಸ್ಪರ್ಧಿಸುವುದಕ್ಕೆ ಅನುಕೂಲವಾಗುವಂತೆ ಸೂಪರ್‌ಸೀಡ್ ಮಾಡುವುದಕ್ಕೆ ತಡೆಯಾಜ್ಞೆ ಕೊಡಿಸಿದರೇ ಹೊರತು ತನಿಖೆಗೆ ತಡೆಯಾಜ್ಞೆ ಕೊಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮೆಗಾಡೇರಿ ವಿಚಾರವಾಗಿ 72 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿರುವ ಜೆಡಿಎಸ್, ಇದೀಗ ಆ ಪಕ್ಷದ ಆಡಳಿತ ಮಂಡಳಿ ಮೆಗಾಡೇರಿ ಕಾಮಗಾರಿ ಗುತ್ತಿಗೆ ಪಡೆದವರಿಗೆ 70 ಕೋಟಿ ರೂ. ಪೇಮೆಂಟ್ ಕೊಟ್ಟಿದ್ದಾರೆ. ಹಾಗಾಗಿ, ಟೀಕಿಸುವುದಕ್ಕೂ ಮುನ್ನ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಅರ್ಥ ಮಾಡಿಕೊಂಡು ಟೀಕಿಸಿದರೆ ಒಳ್ಳೆಯದು ಎಂದರು.

ರಾಜಕೀಯ ಅಸಲು-ಬಡ್ಡಿ ಇದ್ದರೆ ಚರ್ಚೆಗೆ ಸಿದ್ದ : ರಾಜಕೀಯವಾಗಿ ಜೆಡಿಎಸ್‌ನೊಂದಿಗೆ ಯಾವುದಾದರೂ ಅಸಲು ಬಡ್ಡಿ ಇದ್ದರೆ ನಾನು ಬಹಿರಂಗ ಚರ್ಚೆಗೆ ಸಿದ್ದ. ರಾಜಕೀಯವಾಗಿ ನಮ್ಮಿಂದ ಅವರಿಗೆ ಅನ್ಯಾಯವಾಗಿದ್ದರೆ ಬಹಿರಂಗ ಚರ್ಚೆಗೆ ಬರಲಿ.

ನಾನು ಬಾಲಕೃಷ್ಣ ಇಬ್ಬರೇ ಬರುತ್ತೇವೆ. 2016ರಲ್ಲಿ ಹುದ್ದೆಗೇರುವಾಗ ನನ್ನ ಮಗನನ್ನು ದಾರಿ ತಪ್ಪಿಸುತ್ತಿದ್ದೀರಿ ಎಂದು ಹೆಚ್‌ ಡಿ ದೇವೇಗೌಡರು ಹೇಳಿದ್ದನ್ನು ಮರೆತು ಬಿಟ್ಟರಾ?, ಅಂದು ನನ್ನ ಕಣ್ಣಲ್ಲಿ ರಕ್ತ ಬಂದಿದೆ. ಅಂದು ಜಮೀರ್ ಗೆಸ್ಟ್ ಹೌಸ್‌ನಲ್ಲಿ ಏನು ಹೇಳಿದಿರಿ ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಲಿ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಇದನ್ನೂ ಓದಿ: ಪ್ರತಿದಿನ 5 ಸಾವಿರ ಮಂದಿ ಬೆಂಗಳೂರಿಗೆ ಪ್ರಯಾಣ : ಎಚ್ಚರಿಕೆ ಕೈಗೊಳ್ಳದ ಕೋಲಾರ ಸಾರಿಗೆ ಇಲಾಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.