ETV Bharat / state

ಇಬ್ಬರನ್ನು ಬೀದಿ ಜಗಳಕ್ಕೆ ಬಿಟ್ಟು ಸರ್ಕಾರ ಏನು ಮಾಡ್ತಿದೆ: ಚಲುವರಾಯಸ್ವಾಮಿ - ಕುಮಾರಸ್ವಾಮಿ ಮತ್ತು ಸುಮಲತಾ ವಿಚಾರದ ಬಗ್ಗೆ ಚಲುವರಾಯಸ್ವಾಮಿ ಹೇಳಿಕೆ

ಕೆಆರ್​​ಎಸ್​ ಬಿರುಕು ಹಾಗೂ ಅಕ್ರಮ ಗಣಿಗಾರಿಕೆ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ನಡುವೆ ವಾದ-ವಾಗ್ವಾದ ನಡೆಯುತ್ತಿದೆ. ಈ ಸಂಬಂಧ ಮಾಜಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Chaluvaraya
ಚಲುವರಾಯಸ್ವಾಮಿ
author img

By

Published : Jul 9, 2021, 7:30 PM IST

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಬೀದಿ ಜಗಳಕ್ಕೆ ಬಿಟ್ಟು ಸರ್ಕಾರ ಏನು ಮಾಡುತ್ತಿದೆ?. ಇದರಲ್ಲಿ ಸರ್ಕಾರದ ಪಾತ್ರ ಏನಿದೆ? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದರು.

ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಅಕ್ರಮ ಗಣಿಗಾರಿಕೆ ಮಂಡ್ಯ ಜಿಲ್ಲೆ ಒಂದೆ ಕಡೆ ಅಲ್ಲ, ಇಡೀ ರಾಜ್ಯದಲ್ಲೇ ನಡೆಯುತ್ತಿದೆ. ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ತೊಂದರೆ ಇರೋದ್ರಿಂದ ನಮಗೆ ಆತಂಕ ಇದೆ. ಕನ್ನಂಬಾಡಿ ಬಿರುಕು ಚರ್ಚೆ ಮೂರು ವರ್ಷದಿಂದ ನಡೀತಾ ಇದೆ. ಆದರೆ ಕೆಆರ್​ಎಸ್​ ಡ್ಯಾಂ ಸುತ್ತಮುತ್ತಲಿನ ಗಣಿಗಾರಿಕೆ ನಿಲ್ಲಿಸೋಕೆ ಮೂರು ವರ್ಷ ಬೇಕಾ, ಡ್ಯಾಂ ನಿಂದ ರಾಜ್ಯಕ್ಕೆ, ಜಿಲ್ಲೆಗೆ, ತಮಿಳುನಾಡಿಗೆ ಉಪಯೋಗ ಇದೆ. ಆದರೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಆಗಲಿ:

ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ ವಹಿಸಬೇಕು. ಅಕ್ರಮ ಗಣಿಗಾರಿಕೆ ಹಾಗೂ ಮನ್ಮುಲ್‌ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಸುಮಲತಾ, ಮಾಜಿ ಸಿಎಂ ಕುಮಾರಸ್ವಾಮಿ ಬರೆದುಕೊಡ್ಲಿ ಎಂದು ಸಲಹೆ ನೀಡಿದರಲ್ಲದೆ ಇದರ ಬಗ್ಗೆ ಬೀದಿ ಜಗಳ ಮಾಡಿಕೊಂಡು ಕಿತ್ತಾಡ್ತಿರೋದು ಸರಿ ಕಾಣುತ್ತಿಲ್ಲ. ಇವರ ಜಗಳದಿಂದ ಜಿಲ್ಲೆಗೆ ಉಪಯೋಗ ಇಲ್ಲ ಎಂದರು.

ಕೆಆರ್‌ಎಸ್ ಬಿರುಕು ವಿಚಾರಕ್ಕೆ ಬಿಎಸ್‌ವೈ ಅಂತ್ಯವಾಡಬೇಕು:

ಕುಮಾರಸ್ವಾಮಿಯಾಗಲಿ, ಸುಮಲತಾ ಆಗಲಿ, ನಾನಾಗಲಿ ಕೆಆರ್​ಎಸ್​ ಬಿರುಕು ಬಿಟ್ಟಿದೆ ಅಥವಾ ಇಲ್ಲ ಅನ್ನೋದು ಪ್ರಚಾರಕ್ಕೇನ್ರಿ.ಆದರೆ ಸಿಎಂ ಯಡಿಯೂರಪ್ಪನವರು ನೀರಾವರಿ ಸಚಿವರು. ಇಷ್ಟೆಲ್ಲಾ ಬೀದಿ ಜಗಳವಾಗುತ್ತಿದ್ದರೂ ಸುಮ್ಮನಿದ್ದಾರೆ. ಸಿಎಂ ಬಿಎಸ್ವೈ ಅವರೇ ಇದಕ್ಕೆಲ್ಲಾ ಅಂತ್ಯವಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಮಂಡ್ಯದಲ್ಲೊಂದು ಕಟ್ಟೆ ಇರಬಹುದು, ಅದಕ್ಕೆ ಹರಿದು ಬರೋ ನೀರು ಕೊಡಗಿನದ್ದು: ಪ್ರತಾಪ್ ಸಿಂಹ

ಮಾತಿನಿಂದ ಯಾರ ಬಾಯಿ ಮುಚ್ಚಿಸಕ್ಕೆ ಆಗಲ್ಲ:

ಮೈಶುಗರ್ ಕಾರ್ಖಾನೆ ನಿಂತಿದ್ದ ಸಂದರ್ಭದಲ್ಲಿ ಹೆಚ್​ಡಿಕೆ ಸಿಎಂ ಆಗಿದ್ದಾಗ ಅದನ್ನು ನಿಲ್ಲಿಸಿ ಹೊಸದೊಂದು ಕಾರ್ಖಾನೆ ಮಾಡುವುದಾಗಿ ಹೇಳಿದ್ದರು.ಮಾತಿನಿಂದ ಯಾರ ಬಾಯಿ ಮುಚ್ಚಿಸೋಕೆ ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಯಾರೂ ಹೇಡಿಗಳಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.