ಮಂಡ್ಯ : ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು. ಶೀಘ್ರವಾಗಿ ಮರು ಆರಂಭಿಸಬೇಕು ಎಂಬ ಬೇಡಿಕೆಯೊಂದಿಗೆ ರೈತ ಹಿತರಕ್ಷಣಾ ಸಮಿತಿ ದಶಕಗಳ ನಂತರ ಮಾಜಿ ಸಂಸದ ಜಿ ಮಾದೇಗೌಡರ ನೇತೃತ್ವದಲ್ಲಿ ಧರಣಿ ಮಾಡ್ತಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡುತ್ತಿರುವ ಸಮಿತಿ ಸದಸ್ಯರು, ಮೈಶುಗರ್ ಸರ್ಕಾರವೇ ನಡೆಸಬೇಕು, ಒ ಅಂಡ್ ಎಂ ಅಡಿ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಮುಖಂಡರು ಕೂಡ ಹೋರಾಟಕ್ಕೆ ಬಲ ನೀಡಿದ್ದಾರೆ.