ಮಂಡ್ಯ: ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಇಂದು ರೈತರು ಕೆ.ಆರ್.ಎಸ್‌ಗೆ ಮುತ್ತಿಗೆ ಹಾಕಲಿರುವ ಹಿನ್ನೆಲೆ ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ.
ಮಧ್ಯಾಹ್ನದವರೆಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡಿರುವ ರೈತರು, ಮಧ್ಯಾಹ್ನದ ವೇಳೆಗೆ ಅಣೆಕಟ್ಟೆಗೆ ಮುತ್ತಿಗೆ ಹಾಕಲಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದು, ಕೆ.ಆರ್.ಎಸ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭದ್ರತೆಗಾಗಿ ಕೆಎಸ್ಆರ್ಪಿ ಹಾಗೂ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯದಿಂದ ತೂಬಿನಕೆರೆ, ದೊಡ್ಡ ಬ್ಯಾಡರಹಳ್ಳಿ, ಪಾಂಡವಪುರ, ಅರಳಕುಪ್ಪೆ ಮಾರ್ಗವಾಗಿ ರೈತರು ಕೆ.ಆರ್.ಎಸ್ ತಲುಪಲಿದ್ದಾರೆ.