ಮಂಡ್ಯ: ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ನಾನಲ್ಲ. ಸಾಯುವವರೆಗೂ ಹೆಣದ ಮೇಲೆ ಫ್ಲಾಗ್ ಹಾಕುವವರಗೆ ರಾಜಕಾರಣದಲ್ಲಿರಬೇಕು ಎನ್ನುವವರ ಸಂಖ್ಯೆ ಹೆಚ್ಚಾಗ್ತಿದೆ. ನನ್ನ ಚುನಾವಣಾ ರಾಜಕೀಯ ನಿವೃತ್ತಿ ಸಯಂಪ್ರೇರಿತ ನಿರ್ಧಾರ ಯಾರ ಒತ್ತಡವು ಇಲ್ಲ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ಬರ ಅಧ್ಯಯನ ಮಾಡಲು ಮಂಡ್ಯಕ್ಕೆ ಆಗಮಿಸಿದ ವೇಳೆ ಮದ್ದೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ರಾಷ್ಟ್ರೀಯ ಕಾರ್ಯದರ್ಶಿ ಕೂಡ ಪಕ್ಷದಲ್ಲಿ ಆಗಿದ್ದೆ, ಕೇಂದ್ರದಲ್ಲಿ ಏಳು ವರ್ಷ ಮೋದಿ ಅವರ ಜೊತೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಿಎಂ ಆಗಿದ್ದೆ, ರಾಜ್ಯಾಧ್ಯಕ್ಷ ಕೂಡ ಆಗಿದ್ದೆ ಎಂದು ಹೇಳಿದ ಅವರು ಇಂದಿನ ದಿನಗಳಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವರೆಗೂ ಮತ್ತು ನನ್ನ ಶವಕ್ಕು ಕೂಡು ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ಭಾವನೆಯಲ್ಲಿ ರಾಜಕೀಯ ಮಾಡುವಂತಹ ರಾಜನೀತಿಯನ್ನು ನಾನು ಒಪ್ಪಲ್ಲ ಎಂದರು.
25 ವರ್ಷದ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕು ಎಂದುಕೊಂಡಿದ್ದೇ. ಆದರೇ ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ನಾನು ಕಳೆದ ಬಾರಿ ಚುನಾವಣೆಯಲ್ಲಿ ಸ್ವರ್ಧೆ ಮಾಡಿದ್ದೆ. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಈ ಬಾರಿ ಆರು ತಿಂಗಳ ಮುಂಚೆ ಹೇಳಿದರೆ ಹೊಸಬರನ್ನ ಹುಡುಕಲು ಅನುಕೂಲ ಆಗುತ್ತೆ ಎಂದು ನಿವೃತ್ತಿ ಬಗ್ಗೆ ತಿಳಿಸಿದ್ದೇನೆ. ಪಕ್ಷದ ಕೆಲಸ ಮಾಡಲು ಮಾತ್ರ ಅವಕಾಶ ಕೊಡಿ ಎಂದಿದ್ದೇನೆ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡವೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಪಕ್ಷ ಸೂಚನೆ ಮೇರೆಗೆ ಡಿವಿಎಸ್ ನಿವೃತ್ತಿ ಎಂಬ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಕೇಂದ್ರದ ಯಾವುದೇ ನಾಯಕರ ಒತ್ತಡ ಇಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಒತ್ತಡದ ರಾಜಕಾರಣ ಮಾಡಿದವನಲ್ಲ. ನನ್ನ ಸ್ವಇಚ್ಛೆಯಿಂದ ಚುನಾವಣ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ. ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ. ನಮ್ಮ ಪಕ್ಷದ ಆದೇಶವನ್ನು ಪಾಲನೆ ಮಾಡಿದವನು ನಾನು. ಕೇಂದ್ರದಲ್ಲಿ ಮಂತ್ರಿಗಳ ಬದಲಾವಣೆ ಮಾಡಲು ಕರೆಸಿದ್ದರು. ಆಗ ಸಚಿವನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆವು. ಇಂದು ಸಾಯುವವರೆಗೂ ಮತ್ತು ಹೆಣದ ಮೇಲೆ ಫ್ಲಾಗ್ ಹಾಕುವವರಗೆ ಇರಬೇಕು ಎನ್ನುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆ ರೀತಿಯ ಸ್ವಾರ್ಥ ರಾಜಕಾರಣಿ ನಾನಲ್ಲ. ರಾಜಕೀಯದಿಂದ ನಿವೃತ್ತಿಯಾಗಲ್ಲ, ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತಿಯಾಗಿದ್ದೆನೆ. ನನಗೆ ಎಲ್ಲವನ್ನೂ ಕೊಟ್ಟ ನಮ್ಮ ಪಕ್ಷಕ್ಕೆ ನಾನು ನಿರಂತರವಾಗಿ ದುಡಿಯುತ್ತೇನೆ ಎಂದರು .
ಬಳಿಕ ಶಾಸಕ ಎಸ್.ಟಿ ಸೋಮಶೇಖರ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದು ಕೈಯಲ್ಲಿ ಐದು ಬೆರಳು ಸಮಾನವಿಲ್ಲ. ಅದೇ ರೀತಿ ರಾಜಕೀಯ ಪಕ್ಷದಲ್ಲಿ ಕೆಲವರು ಆಚೆ ಈಚೆ ಇರುತ್ತಾರೆ ಅದು ಸರ್ವೇ ಸಾಮಾನ್ಯ. ನಾನು ಆರ್ಗ್ಯೂಮೆಂಟ್ ಮಾಡಲ್ಲ ರಾಜಕೀಯ ಪಕ್ಷದಲ್ಲಿ ಎಲ್ಲರೂ ಒಂದೇ ರೀತಿ ಇರಲ್ಲ. ಬೇರೆ ಮನಸ್ಸು ಇರುತ್ತದೆ. ಪಕ್ಷದಲ್ಲಿ ಆಂತರಿಕವಾಗಿ ಮಾತಾಡಿದ ವ್ಯಕ್ತಿಗೆ ನಾನು ಉತ್ತರ ಕೊಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ: ಬಿ ಎಸ್ ಯಡಿಯೂರಪ್ಪ