ಮಂಡ್ಯ: ಕಾವೇರಿ ನದಿಯಲ್ಲಿ ಮೀನಿನಂತೆ ಈಜಬೇಕೆ, ರಿವರ್ ರಾಫ್ಟಿಂಗ್ ಹೋಗಬೇಕೆ? ಮತ್ತೇಕೆ ತಡ. ಶ್ರೀರಂಗಪಟ್ಟಣದ ದಸರಾಗೆ ಬನ್ನಿ. ದಸರಾ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ನಿಮಗಾಗಿ ಸುವರ್ಣಾವಕಾಶ ಕೊಟ್ಟಿದೆ.
ಕಾವೇರಿ ನದಿಯಲ್ಲಿ 4 ಕಿಲೋ ಮೀಟರ್ ರಾಫ್ಟಿಂಗ್ ಹೋಗುವ ಅವಕಾಶ ಸಿಕ್ಕಿದೆ. ಇದಕ್ಕಾಗಿ ಮಡಿಕೇರಿ, ಚಿಕ್ಕಮಗಳೂರ ಕಡೆಗೆ ವಾಲುತ್ತಿದ್ದ ಪ್ರವಾಸಿಗರು ಈಗ ಕಾವೆರಿ ನದಿಯತ್ತ ದೃಷ್ಟಿ ನೆಟ್ಟಿದ್ದಾರೆ. ಅಕ್ಟೋಬರ್ 8ರವರೆಗೆ ಈ ಅವಕಾಶ ನೀಡಲಾಗಿದ್ದು, ಯುವ ಜನತೆ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ರಾಫ್ಟಿಂಗ್ಗೆ ಫಿದಾ ಆಗಿರುವ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.