ಮಂಡ್ಯ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವುದು ಬೇಡ. ಒಂದು ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿ ಆದೇಶ ಹೊರಡಿಸಬೇಕು ಎಂದು ಶಾಸಕ ಡಾ. ಕೆ.ಅನ್ನದಾನಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಲೇಜುಗಳನ್ನು ಆರಂಭಿಸಿ ಅನೇಕ ವಿದ್ಯಾರ್ಥಿಗಳು ಕೋವಿಡ್‌ಗೆ ತುತ್ತಾಗಿದ್ದಾರೆ. ಹೀಗಾಗಿ ಜನವರಿಯಲ್ಲಿ ಶಾಲೆಗಳನ್ನು ಸರ್ಕಾರ ಪ್ರಾರಂಭಿಸಬಾರದು. ಏನಾದರೂ ಶಾಲೆ ಆರಂಭಿಸಿದ್ದೇ ಆದಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಸರ್ಕಾರ ಈ ಬಾರಿ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿ ಆದೇಶ ನೀಡಬೇಕು. ಮುಂದಿನ ವರ್ಷ ಮಾರ್ಚ್ ಸಂದರ್ಭದಲ್ಲಿ ಒಟ್ಟಿಗೆ ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಓದಿ: ಪಾಲಕರಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಮಾಡಿದ ಮನವಿ ಏನು?
ಕಾನೂನಿನ ಅಡಿಯಲ್ಲಿ ಹೋರಾಟ ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ಬಟ್ಟೆಗೆ ಕೈ ಹಾಕಿರೋದು ಸಂಸ್ಕೃತಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲಿ ಹಾಗೂ ಜಯಲಲಿತಾ ವರ್ಸಸ್ ಕರುಣಾನಿಧಿಯವರ ನಡುವೆ ವಿಧಾನಸಭೆಯಲ್ಲಿ ತಳ್ಳಾಟ ನೂಕಾಟ ನಡೆದಿತ್ತು. ಆದರೆ ಬುದ್ಧಿವಂತರ ಮೇಲ್ಮನೆಯಲ್ಲಿ ಈ ರೀತಿ ತಳ್ಳಾಟ ನೂಕಾಟ ನಿಜಕ್ಕೂ ಬೇಸರ ತರಿಸುವಂತಹದು ಎಂದರು.
ಮೈಲಾರಲಿಂಗೇಶ್ವರ ದೇವಾಲಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳ್ಳಿಯ ವಸ್ತು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಅವರು ವೈಯಕ್ತಿಕವಾಗಿ ದೇವರಿಗೆ ಕಾಣಿಕೆಯಾಗಿ ನೀಡಿದ್ದಾರೆ. ಅವರು ನೀಡಿರುವ ಬೆಳ್ಳಿಯ ವಸ್ತು ಸರ್ಕಾರದ ಹಣದ್ದಲ್ಲ. ಹಾಗಾಗಿ ಅದು ನನಗೆ ಬೇಡವಾದ ವಿಚಾರ ಎಂದರು.