ETV Bharat / state

ಮಂಡ್ಯದಲ್ಲಿ ಇಂದು 21 ಮಂದಿ ಕೊರೊನಾ ಸೋಂಕಿತರು ಗುಣಮುಖ!

author img

By

Published : Jun 16, 2020, 8:32 PM IST

ರಾಜ್ಯದ ಕೊರೊನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿದ್ದ ಸಕ್ಕರೆ ನಾಡು ಮಂಡ್ಯದಲ್ಲಿ ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದರಿಂದ ಜಿಲ್ಲೆಯ ಜನ ಸ್ವಲ್ಪ ನಿರಾಳರಾಗಿದ್ದಾರೆ.

Decrease in the rate of infection at Mandya
ಸೋಂಕಿತರ ಸಂಖ್ಯೆ ಇಳಿಮುಖ

ಮಂಡ್ಯ: ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದ್ದು, ಇಂದು 21 ಮಂದಿ ಗುಣಮುಖರಾಗಿದ್ದಾರೆ. ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ.

ಜಿಲ್ಲೆಯಲ್ಲಿ ಇದುವರೆಗೂ 343 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಇವರಲ್ಲಿ 282 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 61 ಸಕ್ರಿಯ ಪ್ರಕರಣಗಳಿವೆ‌. ಭಾನುವಾರದ ವೇಳೆಗೆ ಮತ್ತಷ್ಟು ಮಂದಿ ಗುಣಮುಖರಾಗಲಿದ್ದಾರೆ. ಮಿಮ್ಸ್ ವೈದ್ಯರ ಚಿಕಿತ್ಸೆಗೆ ಸೋಂಕಿನಿಂದ ಗುಣಮುಖರಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ವಾರಂಟೈನ್ ಸಂಖ್ಯೆ ಹೆಚ್ಚಳ:

ಜಿಲ್ಲೆಯಲ್ಲಿ 5312 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಐಸೋಲೇಶನ್ ವಾರ್ಡ್‌ನಲ್ಲಿ 60 ಮಂದಿ ಇದ್ದು, ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ 265 ಮಂದಿ ಇದಾರೆ. 395 ಮಂದಿಯ ಫಲಿತಾಂಶ ಬರಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.