ETV Bharat / state

ಕಬ್ಬು ಸಾಗಾಟಕ್ಕೆ ಕ್ರಮ ಕೈಗೊಳ್ಳದಿದ್ರೆ ಉಗ್ರ ಹೋರಾಟ: ಸಿ.ಎಸ್.ಪುಟ್ಟರಾಜು ಎಚ್ಚರಿಕೆ

ಜಿಲ್ಲೆಯ ಕಬ್ಬು ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕಟಾವಿಗೆ ಬಂದಿರುವ ಕಬ್ಬನ್ನು ಸಾಗಾಣಿಕೆ ಮಾಡಲು ಇನ್ನು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.

ಸಿ.ಎಸ್. ಪುಟ್ಟರಾಜು , CS Puttaraju
author img

By

Published : Sep 18, 2019, 3:53 PM IST

ಮಂಡ್ಯ: ಜಿಲ್ಲೆಯಲ್ಲಿ ಕಬ್ಬಿನ ಸಮಸ್ಯೆ ಹೆಚ್ಚಾಗಿದ್ದು, ಕಳೆದ 15 ದಿನಗಳ ಹಿಂದೆ ಸಿಎಂ ಕರೆದ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೇವೆ. ಸರ್ಕಾರ ರೈತರು ಬೀದಿಗೆ ಬೀಳುವ ಮೊದಲು ಎಚ್ಚೆತ್ತುಕೊಂಡು ಕಬ್ಬನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು

ಕೆ.ಆರ್.ಎಸ್​ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯ ಕಬ್ಬು ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕಟಾವಿಗೆ ಬಂದಿರುವ ಕಬ್ಬನ್ನು ಸಾಗಣೆ ಮಾಡಲು ಇನ್ನು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮೈತ್ರಿ ಸರ್ಕಾರದ ನಿರ್ಧಾರದಂತೆ ಮೈ ಶುಗರ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಗೆ ಬೇಕಾದ ಹಣವನ್ನು ನಮ್ಮ ಸರ್ಕಾರದಲ್ಲೇ ಘೋಷಣೆ ಮಾಡಲಾಗಿತ್ತು. ಹಣ ಬಿಡುಗಡೆ ಮಾಡಿ ಕರ್ಖಾನೆ ಆರಂಭಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.

ಚಲುವರಾಯಸ್ವಾಮಿಗೆ ಎಚ್ಚರಿಕೆ:
ಬೆಳಗ್ಗೆ ಸಿದ್ದರಾಮಯ್ಯನವರ ಹತ್ತಿರ, ರಾತ್ರಿ ಯಡಿಯೂರಪ್ಪ ಜೊತೆ ಒಡನಾಟ ಹೊಂದಿರುವ ಚಲುವರಾಯಸ್ವಾಮಿ ಮೊದಲು ತಾವು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದನ್ನು ಹೇಳಬೇಕು. ಅವರ ಹತ್ತಿರ ರಾಜಕೀಯ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ತೀರ್ಮಾನದಂತೆ ನಿಖಿಲ್ ಸ್ಪರ್ಧೆ:
ಪಕ್ಷದ ತೀರ್ಮಾನದಂತೆ ನಿಖಿಲ್ ಸ್ಪರ್ಧೆ ಮಾಡಿದ್ದರು. ಚುನಾವಣೆಯ ನೇತೃತ್ವ ನಾನೇ ವಹಿಸಿದ್ದೆ. ಹೇಳಿದ ಮಾತಿನಂತೆ ರಾಜಕೀಯ ನಿವೃತ್ತಿಗೆ ಚಿಂತನೆ ನಡೆಸಿದ್ದೇವೆ. ಆದರೆ ವರಿಷ್ಠರ ಮಾತಿನಂತೆ ಆ ತೀರ್ಮಾನದಿಂದ ಹಿಂದೆ ಸರಿದೆ ಎಂದು ಸ್ಪಷ್ಟನೆ ನೀಡಿದರು.

ಅಂಬರೀಶ್ ಅವರ ಹೆಸರು, ಅನುಕಂಪದಿಂದ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದು, ಚಲುವರಾಯಸ್ವಾಮಿ ಅವರ ವರ್ಚಸ್ಸಿನಿಂದ ಗೆಲುವು ಸಾಧಿಸಿಲ್ಲ. ಒಂದೊಮ್ಮೆ ವರ್ಚಸ್ಸು ಇದ್ದರೆ ನಾಗಮಂಗಲ ಜನತೆ ಯಾಕೆ ನಿಖಿಲ್‌ಗೆ ಲೀಡ್ ನೀಡುತ್ತಿದ್ದರು ಎಂದು ಪ್ರಶ್ನಿಸಿದರು‌.

ಮನ್‌ಮುಲ್ ಅಧಿಕಾರ ಹಿಡಿಯಲು ರಾಜ್ಯ ಸರ್ಕಾರ ವಾಮಮಾರ್ಗ:
ಮನ್‌ಮುಲ್‌ನಲ್ಲಿ ಅಧಿಕಾರ ಹಿಡಿಯಲು ಸರ್ಕಾರ ವಾಮ ಮಾರ್ಗ ಅನುಸರಿಸಲು ಮುಂದಾಗಿದೆ. ನಮ್ಮ ನಿರ್ದೇಶಕರ ಸ್ಥಾನವನ್ನು ಅಮಾನತ್ತು ಮಾಡಲು ಒಳ ಸಂಚು ಮಾಡಲಾಗುತ್ತಿದೆ. ಒಂದೊಮ್ಮೆ ಸಂಚು ನಡೆದರೆ ಜಿಲ್ಲಾಧಿಕಾರಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

ಚಲುವರಾಯಸ್ವಾಮಿ ನಮ್ಮ ಸದಸ್ಯ, ಮನ್‌ಮುಲ್ ನಿರ್ದೇಶಕ ಎಸ್‌.ಪಿ. ಸ್ವಾಮಿ ಮನೆ ಹಾಳು ಮಾಡಲು ಮುಂದಾಗಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಸಭೆ ಚರ್ಚೆ ಮಾಡುತ್ತಿದ್ದಾರೆ. ಸ್ವಾಮಿ ಅವರ ಪತ್ನಿ ನಾಗರತ್ನಗೆ ಜಿಪಂ ಅಧ್ಯಕ್ಷ ಸ್ಥಾನ ತಪ್ಪಿಸಲು ಚಲುವರಾಯಸ್ವಾಮಿ ಮುಂದಾಗಿದ್ದರು‌. ಆದರೆ ಈಗ ಅವರನ್ನೇ ಕರೆದುಕೊಂಡು ಸಭೆ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.

Intro:ಮಂಡ್ಯ: ಜಿಲ್ಲೆಯ ಕಬ್ಬು ಬೆಳೆಗಾರರ ರಕ್ಷಣೆಗಾಗಿ ರಾಜ್ಯ ಸರ್ಕಾರಕ್ಕೂ, ಎಚ್‌ಡಿಡಿ ಮತ್ತು ಎಚ್‌ಡಿಕೆ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಖಡಕ್ ಎಚ್ಚರಿಕೆ ನೀಡಿದರು.

Body:ಕೆ.ಆರ್.ಎಸ್.ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಜಿಲ್ಲೆಯ ಕಬ್ಬು ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕಟಾವಿಗೆ ಬಂದಿರುವ ಕಬ್ಬನ್ನು ಸಾಗಾಣಿಕೆ ಮಾಡಲು ಕ್ರಮ ಕೈಗೊಳ್ಳದೇ ಇದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೈತ್ರಿ ಸರ್ಕಾರದ ನಿರ್ಧಾರದಂತೆ ಮೈಶುಗರ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಗೆ ಬೇಕಾದ ಹಣವನ್ನು ನಮ್ಮ ಸರ್ಕಾರದಲ್ಲೇ ಘೋಷಣೆ ಮಾಡಲಾಗಿತ್ತು. ಹಣ ಬಿಡುಗಡೆ ಮಾಡಿ ಕರ್ಖಾನೆ ಆರಂಭಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.

ಚಲುವರಾಯಸ್ವಾಮಿ ಗೆ ಎಚ್ಚರಿಕೆ: ಬೆಳಗ್ಗೆ ಸಿದ್ದರಾಮಯ್ಯನವರ ಹತ್ತಿರ, ರಾತ್ರಿ ಯಡಿಯೂರಪ್ಪ ಜೊತೆ ಒಡನಾಟ ಹೊಂದಿರುವ ಚಲುವರಾಯಸ್ವಾಮಿ ಮೊದಲು ತಾವು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದನ್ನು ಹೇಳಬೇಕು. ಅವರ ಹತ್ತಿರ ರಾಜಕೀಯ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ತೀರ್ಮಾನದಂತೆ ನಿಖಿಲ್ ಸ್ಪರ್ಧೆ:
ಪಕ್ಷದ ತೀರ್ಮಾನದಂತೆ ನಿಖಿಲ್ ಸ್ಪರ್ಧೆ ಮಾಡಿದ್ದರು. ಚುನಾವಣೆಯ ನೇತೃತ್ವ ನಾನೇ ವಹಿಸಿದ್ದೆ. ಹೇಳಿದ ಮಾತಿನಂತೆ ರಾಜಕೀಯ ನಿವೃತ್ತಿಗೆ ಚಿಂತನೆ ನಡೆಸಿದ್ದೆ, ಆದರೆ ವರಿಷ್ಠರ ಮಾತಿನಂತೆ ಆ ತೀರ್ಮಾನದಿಂದ ಹಿಂದೆ ಸರಿದೆ ಎಂದು ಸ್ಪಷ್ಟನೆ ನೀಡಿದರು.
ಅಂಬರೀಶ್ ಅವರ ಹೆಸರು, ಅನುಕಂಪದಿಂದ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದು, ಚಲುವರಾಯಸ್ವಾಮಿ ಅವರ ವರ್ಚಸ್ಸಿನಿಂದ ಗೆಲುವು ಸಾಧಿಸಿಲ್ಲ‌. ಒಂದೊಮ್ಮೆ ವರ್ಚಸ್ಸು ಇದ್ದರೆ ನಾಗಮಂಗಲ ಜನತೆ ಯಾಕೆ ನಿಖಿಲ್‌ಗೆ ಲೀಡ್ ನೀಡುತ್ತಿದ್ದರು ಎಂದು ಪ್ರಶ್ನಿಸಿದರು‌.

ಮನ್‌ಮುಲ್ ಅಧಿಕಾರ ಹಿಡಿಯಲು ರಾಜ್ಯ ಸರ್ಕಾರ ವಾಮಮಾರ್ಗ: ಮನ್‌ಮುಲ್‌ನಲ್ಲಿ ಅಧಿಕಾರ ಹಿಡಿಯಲು ಸರ್ಕಾರ ವಾಮ ಮಾರ್ಗ ಅನುಸರಿಸಲು ಮುಂದಾಗಿದೆ. ನಮ್ಮ ನಿರ್ದೇಶಕರ ಸ್ಥಾನವನ್ನು ಅಮಾನತ್ತು ಮಾಡಲು ಒಳ ಸಂಚು ಮಾಡಲಾಗುತ್ತಿದೆ. ಒಂದೊಮ್ಮೆ ಸಂಚು ನಡೆದರೆ ಜಿಲ್ಲಾಧಿಕಾರಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.
ಚಲುವರಾಯಸ್ವಾಮಿ ನಮ್ಮ ಸದಸ್ಯ, ಮನ್‌ಮುಲ್ ನಿರ್ದೇಶಕ ಎಸ್‌.ಪಿ. ಸ್ವಾಮಿ ಮನೆ ಹಾಳು ಮಾಡಲು ಮುಂದಾಗಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಸಭೆ ಚರ್ಚೆ ಮಾಡುತ್ತಿದ್ದಾರೆ. ಸ್ವಾಮಿ ಅವರ ಪತ್ನಿ ನಾಗರತ್ನಗೆ ಜಿಪಂ ಅಧ್ಯಕ್ಷ ಸ್ಥಾನ ತಪ್ಪಿಸಲು ಚಲುವರಾಯಸ್ವಾಮಿ ಮುಂದಾಗಿದ್ದರು‌. ಆದರೆ ಈಗ ಅವರನ್ನೇ ಕರೆದುಕೊಂಡು ಸಭೆ ಮಾಡುತ್ತಿದ್ದಾರೆ. ಇದು ಹೀಗೆ ಮುಂದು ವರೆದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.