ETV Bharat / state

ಮಂಡ್ಯದಲ್ಲಿ ಕಿಡ್ಯ್ನಾಪ್ & ಮರ್ಡರ್: ತಮ್ಮನ ಬದಲು ಅಣ್ಣನ ಕೊಂದು ಸುಟ್ಟು ಹಾಕಿದ್ರು!

ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯ ಸೇಡಿಗೆ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

author img

By

Published : Jun 5, 2023, 8:34 PM IST

four-arrested-in-mandya-kidnap-and-murder-case
ಮಂಡ್ಯದಲ್ಲಿ ಕಿಡ್ಯ್ನಾಪ್ ಅಂಡ್ ಮರ್ಡರ್ : ತಮ್ಮನ ಬದಲು ಅಣ್ಣನನ್ನು ಕೊಂದು ಸುಟ್ಟು ಹಾಕಿದ ಪಾತಕಿಗಳು
ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಎನ್. ಯತೀಶ್ ಮಾಹಿತಿ

ಮಂಡ್ಯ : ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯ ಸೇಡಿನ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಮಂಡ್ಯದ ಸಾತನೂರು ಎಂಬಲ್ಲಿ ನಡೆದಿದೆ. ಇಲ್ಲಿ ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನು ಅಪಹರಿಸಿದ ದುಷ್ಕರ್ಮಿಗಳು ಕೊಂದು ಪೆಟ್ರೋಲ್​ ಹಾಕಿ ಸುಟ್ಟು ಹಾಕಿದ್ದಾರೆ. 13 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ವೆಂಕಟೇಶ್​ ಎಂದು ಗುರುತಿಸಲಾಗಿದೆ. ಬೇವನಹಳ್ಳಿ ಗ್ರಾಮದ ಭೀಮೇಶ್, ಆನೆಕೆರೆ ಬೀದಿಯ ಸುನೀಲ್, ವಿನಯ್ ಹಾಗೂ ನಿರಂಜನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವೆಂಕಟೇಶ್​ ಸಹೋದರ ರಮೇಶ್​ ಹಾಗೂ ಭೀಮೇಶ್​ ನಡುವೆ ಜಗಳ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೇ 23ರಂದು ಪೊಲೀಸರ ಸೋಗಿನಲ್ಲಿ ರಮೇಶ್​ನನ್ನು ಹುಡುಕಿಕೊಂಡು ಈ ಆರೋಪಿಗಳು ಅವರ ಮನೆಗೆ ಬಂದಿದ್ದರು. ಈ ವೇಳೆ ರಮೇಶ್​ ಮನೆಯಲ್ಲಿ ಇಲ್ಲದ ಕಾರಣ ಆತನ ಅಣ್ಣ ವೆಂಕಟೇಶ್​ನನ್ನು ಅಪಹರಿಸಿಕೊಂಡು ಹೋಗಿದ್ದರು. ಬಳಿಕ ಆರೋಪಿಗಳು ವೆಂಕಟೇಶ್​​ಗೆ ಹಲ್ಲೆ ಮಾಡಿದ್ದು, ವೆಂಕಟೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ವೆಂಕಟೇಶ್​​ನ ಮೃತದೇಹವನ್ನು ಆರೋಪಿಗಳು ಹುಲಿಕೆರೆ ಕೊಪ್ಪಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ. ಆ ಬಳಿಕ ಆರೋಪಿಗಳು ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ವಿವಿಧೆಡೆ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಟೋಲ್ ಹಣದ ವಿಚಾರಕ್ಕೆ ಗಲಾಟೆ.. ಯುವಕನನ್ನು ಹಾಕಿ ಸ್ಟಿಕ್​​ನಿಂದ ಕೊಲೆ ಮಾಡಿದ ದುಷ್ಕರ್ಮಿಗಳು

ಮಗ ನಾಪತ್ತೆಯಾಗಿರುವ ಬಗ್ಗೆ ಮೃತ ವೆಂಕಟೇಶ್​ ಅವರ ತಾಯಿ ಮಂಡ್ಯ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಜೊತೆಗೆ ನಾಲ್ವರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಿಂದೆ ಹಣಕಾಸು ಸಮಸ್ಯೆ ಬಗೆಹರಿಸಲು ರಮೇಶ್ ಭೀಮೇಶ್‌ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ರಮೇಶ್ ತನ್ನ ಸಹಚರರೊಂದಿಗೆ ಭೀಮೇಶ್​ಗೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಭೀಮೇಶ್​ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಬೆಂಗಳೂರು ಪೊಲೀಸರು ರಮೇಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಜಾಮೀನಿನ ಮೇಲೆ ರಮೇಶ್​ ಬಿಡುಗಡೆಯಾಗಿ ಹೊರಬಂದಿದ್ದ.

ರಮೇಶ್ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿದ ಭೀಮೇಶ್ ಮತ್ತು ಅವನ ಸಹಚರರು ರಮೇಶ್‌ನನ್ನು ಹತ್ಯೆ ಮಾಡಲು ಹೊಂಚು ಹಾಕಿದ್ದರು ಎಂದು ಹೇಳಲಾಗಿದೆ. ಅದರಂತೆ ಪೊಲೀಸರ ಸೋಗಿನಲ್ಲಿ ರಮೇಶ್​ ಮನೆಗೆ ಬಂದಿದ್ದರು. ಆದರೆ ರಮೇಶ್ ಮನೆಯಲ್ಲಿ ಇಲ್ಲದ ಕಾರಣ ಅಣ್ಣ ವೆಂಕಟೇಶ್‌ನನ್ನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಎನ್. ಯತೀಶ್ ಪ್ರಕರಣ ಮಾಹಿತಿ ನೀಡಿದರು.

ಇದನ್ನೂ ಓದಿ : ಕಲಘಟಗಿ ಮಧುಮಗನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ವಿವಾಹೇತರ ಸಂಬಂಧವೇ ಹತ್ಯೆಗೆ ಕಾರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.