ಮಂಡ್ಯ: ಪತ್ನಿಯ ನಿಧನದ ಸುದ್ದಿ ಕೇಳಿ ಕೊರೊನಾ ಸೋಂಕಿತ ಪತಿ ಕೂಡ ಆಘಾತಗೊಂಡು ಸಾವನ್ನಪ್ಪಿರುವ ಮನಕಲಕುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಪತ್ನಿ, ಪತ್ನಿ ಸಾವಿನಲ್ಲೂ ಒಂದಾಗಿದ್ದಾರೆ. ಪತ್ನಿ ಮೃತರಾದ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟಿದ್ದಾರೆ. ಜಿಲ್ಲಾ ರೈತ ಸಂಘದ ಹಿರಿಯ ಮುಖಂಡ ಸಿ.ಚಾಮುಂಡಪ್ಪ (74) ಹಾಗೂ ಇವರ ಪತ್ನಿ ಜಯಮ್ಮ (62) ಮೃತ ದಂಪತಿ.
ಶುಕ್ರವಾರ ಬೆಳಗ್ಗೆ ಜಯಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸಂಜೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಮಾರನೇ ದಿನ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಪತಿ ಹಾಗೂ ರೈತ ಸಂಘದ ಹಿರಿಯ ಮುಖಂಡ ಸಿ.ಚಾಮುಂಡಪ್ಪ ನಿಧನರಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.
ಓದಿ: ಸೋಂಕಿತರ ಸಂಖ್ಯೆ ತಗ್ಗುತ್ತಿದ್ದರೂ ನಿಲ್ಲದ ಸಾವು.. ದೇಶದಲ್ಲಿ ಮತ್ತೆ 4,194 ಮಂದಿ ಕೊರೊನಾಗೆ ಬಲಿ